Saturday, July 27, 2024
Homeಸುದ್ದಿಬಂಟಕಲ್ಲು: ಹದಗೆಟ್ಟ ಸ್ಥಿತಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಮುಂಭಾಗದ ರಾಜ್ಯ ಹೆದ್ದಾರಿ; ಪ್ಯಾಚ್ ವರ್ಕ್, ಕಪ್ಪು ಪೈಂಟ್...

ಬಂಟಕಲ್ಲು: ಹದಗೆಟ್ಟ ಸ್ಥಿತಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಮುಂಭಾಗದ ರಾಜ್ಯ ಹೆದ್ದಾರಿ; ಪ್ಯಾಚ್ ವರ್ಕ್, ಕಪ್ಪು ಪೈಂಟ್ ನ್ನೇ ಕಂಡ ರಸ್ತೆಗೆ ಶಾಶ್ವತ ಪರಿಹಾರ ಸಿಗಬಹುದೇ.!?

ಬಂಟಕಲ್ಲು, ಜು.17: ಇಂಜಿನಿಯರಿಂಗ್ ಕಾಲೇಜ್ ನ ಮುಂಬದಿಯಲ್ಲಿರುವ ಹಲವು ಬಾರಿ ಪ್ಯಾಚ್ ವರ್ಕ್, ಕಪ್ಪು ಪೈಂಟ್ ನ್ನೇ ಅಳವಡಿಸಿ ತಾತ್ಕಾಲಿಕ ಸರಿಮಾಡುವ ಈ ರಸ್ತೆಗೆ ಶಾಶ್ವತ ಪರಿಹಾರ ಸಿಗಬಹುದೇ.!? ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜ್ ನ ಮುಂಬದಿಯಲ್ಲಿರುವ ರಾಜ್ಯ ಹೆದ್ಧಾರಿ ಹದಗೆಟ್ಟಿದ್ದು, ರಸ್ತೆಗಳಲ್ಲೆಲ್ಲಾ ಹೊಂಡಗಳೇ ತುಂಬಿವೆ.

ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ 1-2 ಫೀಟ್ ಆಳವಿರುವ ಈ ಹೊಂಡಗಳನ್ನು ಕಂಡರೆ ಭಯ ಆಗುತ್ತದೆ. ದ್ವಿಚಕ್ರ, ತ್ರಿಚಕ್ರ, ಹಾಗೂ ಲಘು ವಾಹನಗಳಿಗೆ ಈ ರಸ್ತೆಯಲ್ಲಿ ಸಂಚಾರಿಸುವುದು ಒಂದು ದೊಡ್ಡ ಗುರಿ.
ಕಟಪಾಡಿ ಶಂಕರಪುರದಿಂದ ಬರುವ ವಾಹನಗಳು ತಮ್ಮ ಎಡ ಭಾಗದಲ್ಲಿ ಚಲಿಸುವ ಬದಲು, ಬಲ ಬದಿಗೆ ಬಂದು ಹಾದು ಹೋಗುತ್ತಿವೆ.

ಹೀಗಾಗಿ ಹಲವಾರು ಅಪಘಾತಗಳು ಈಗಾಗಲೇ ಈ ಸ್ಥಳದಲ್ಲಿ ಆದು ಹೋಗಿವೆ. ಆದರೂ ಎಚ್ಚೆತ್ತುಕೊಳ್ಳದ ಈ ರಸ್ತೆ ಅಭಿವೃದ್ಧಿ ಇಲಾಖೆಗಳು ಸುಮ್ಮನಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ಅಭಿಪ್ರಾಯಿಸುತ್ತಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News