Sunday, May 19, 2024
Homeಸುದ್ದಿಕೊರಗಜ್ಜನ ಪ್ರಾರ್ಥನೆಗೆ ಇರಿಸಿದ್ದ ವೀಳ್ಯದೆಲೆಯಲ್ಲಿ ಮೂಡಿದ ಬೇರು!: ಅಚ್ಚರಿ ಮೂಡಿಸಿದ ಘಟನೆ

ಕೊರಗಜ್ಜನ ಪ್ರಾರ್ಥನೆಗೆ ಇರಿಸಿದ್ದ ವೀಳ್ಯದೆಲೆಯಲ್ಲಿ ಮೂಡಿದ ಬೇರು!: ಅಚ್ಚರಿ ಮೂಡಿಸಿದ ಘಟನೆ

ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಮಾಡಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು ಬರುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆಯಲ್ಲಿ ನಡೆದಿದೆ.

ಕಳೆದ ತಿಂಗಳು ಮಗುವಿಗೆ ಅನಾರೋಗ್ಯ ಆದಾಗ ಇಲ್ಲಿನ ಶೀನಪ್ಪ ಅವರ ಮನೆಯ ವಠಾರದಲ್ಲಿದ್ದ ಕೊರಗಜ್ಜ ದೈವಕ್ಕೆ ವೀಳ್ಯದೆಲೆ, ಅಡಿಕೆ ಇರಿಸಿ ಪ್ರಾರ್ಥನೆ ಮಾಡಿದ್ದರು.

ಕೆಲವು ದಿನಗಳವರೆಗೂ ಹಸಿರಾಗಿಯೇ ಇದ್ದ ವೀಳ್ಯದೆಲೆ ಅನಂತರ ಬೇರು ಬರಲು ಆರಂಭಿಸಿತು. ತತ್‌ಕ್ಷಣವೇ ಶೀನಪ್ಪ ಅವರು ದೈವಜ್ಞರ ಮೂಲಕ ತಿಳಿದಾಗ ಸತ್ಯದ ಅರಿವಾಯಿತು. ಮಗು ಆರೋಗ್ಯವಾಗಿರುವುದೂ ತಿಳಿಯಿತು. ಹೀಗಾಗಿ ಅದೇ ವೀಳ್ಯದೆಲೆಯನ್ನು ಅವರು ಈಗ ಹೂಕುಂಡದಲ್ಲಿ ಇರಿಸಿ¨ªಾರೆ. ಈಗಲೂ ವೀಳ್ಯದೆಲೆ ಹಸಿರಾಗಿಯೇ ಇದೆ.

ವೀಳ್ಯದೆಲೆಯು ಸಾಮಾನ್ಯವಾಗಿ ವಾರದಲ್ಲಿ ಬಾಡಿ ಹೋಗುತ್ತದೆ. ಅಂತಹದ್ದರಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ಇರಿಸಿರುವ ಈ ವೀಳ್ಯದೆಲೆಯು ಹಸಿರಾಗಿಯೇ ಇದ್ದು ಈಗ ಬೇರು ಮೂಡಿರುವುದು ಭಕ್ತರಿಗೆ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News