ಆಗಸ್ಟ್ 1 ರಿಂದ ಯಾಂತ್ರೀಕೃತ ಮೀನುಗಾರಿಕೆ ಆರಂಭ; ಬಲೆ ಸಿದ್ದತೆಯಲ್ಲಿ ಮೀನುಗಾರರು..!!

ಉಡುಪಿ, ಜು.15: ಮೀನುಗಾರಿಕೆ ಕರಾವಳಿಯ ಪ್ರಮುಖ ಉದ್ಯೋಗ. ಕರಾವಳಿಯ ಸಾವಿರಾರು ಕುಟುಂಬ ಮೀನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದೆ.

ಆದ್ರೆ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮೀನುಗಾರಿಕೆ ಇರೋದಿಲ್ಲ. ಹೀಗಾಗಿ ಈ ವೇಳೆ ಮೀನುಗಾರರು, ಮೀನುಗಾರಿಕೆಯಲ್ಲಿ ಬಳಸಲ್ಪಡುವ ಬಲೆ ನೇಯುವ ವೃತ್ತಿಯಲ್ಲಿ ತೊಡಗಿತ್ತಾರೆ.

ಉಡುಪಿಯ ನೂರಾರು ಮಂದಿ ಮೀನುಗಾರರು ಹಾಗೂ ಹೊರ ರಾಜ್ಯದಿಂದಲೂ ಬಲೆ ನೇಯುವವರನ್ನು ಕರೆಸಿಕೊಳ್ಳುತ್ತಾರೆ.

ಎರಡು ತಿಂಗಳ ಕಾಲ ದೊಡ್ಡ ದೊಡ್ಡ ಬಲೆಯನ್ನು ನೇಯ್ಯುವ ಕೆಲಸ ಮಾಡುತ್ತಾರೆ.

ವಿವಿಧ ಬೋಟ್‌ಗಳು ಹಾಗೂ ದೋಣಿಗಳಿಗೆ ಬೇಕಾಗುವ ಹೊಸ ಬಲೆಯನ್ನು ನೇಯುವ ಕೆಲಸವನ್ನು ಸಮಯದ್ರದ ಬದಿಯಲ್ಲೇ ಶೆಡ್ ಹಾಕಿ ಮಾಡುತ್ತಿರುತ್ತಾರೆ.

ಅಲ್ಲದೇ, ಮೀನುಗಾರಿಕೆ ನಡೆಸುವಾಗ ತುಂಡಾದ ಬಲೆಯನ್ನು, ಸರಿಪಡಿಸುವ ಕಾರ್ಯ ನಡೆಸುತ್ತಾರೆ.

ಜುಲೈ ತಿಂಗಳ ಕೊನೆಯವರೆಗೂ ಬಲೆ ನೇಯುವ ಕೆಲಸ ಮಾಡಿ, ಆಗಸ್ಟ್ ತಿಂಗಳಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭಿಸುತ್ತಾರೆ..

Scroll to Top