Saturday, September 30, 2023
Homeಸುದ್ದಿಟೊಮ್ಯಾಟೋ ಕಾವಲಿಗೆಂದೇ ಇಬ್ಬರು ಬೌನ್ಸರ್; ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಟೊಮ್ಯಾಟೋ ಕಾವಲಿಗೆಂದೇ ಇಬ್ಬರು ಬೌನ್ಸರ್; ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಟೊಮ್ಯಾಟೋಕ್ಕೀಗ ಭಾರೀ ಡಿಮ್ಯಾಂಡ್​​. ಅದರಲ್ಲೂ ರೈತರು ಈ ಬೆಲೆಯಿಂದ ತುಂಬಾ ಖುಷಿಯಾಗಿದ್ದಾರೆ. ಅಷ್ಟು ಮಾತ್ರವಲ್ಲ, ಟೊಮ್ಯಾಟೋ ಬೆಳೆಯುವ ರೈತರಂತೂ ಮಾರುಕಟ್ಟೆಯಲ್ಲಾದ ಬದಲಾವಣೆಯಿಂದ ನಿದ್ದೆ ಮಾಡದಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಾರಣ ಟೊಮ್ಯಾಟೋ ಕಳ್ಳರಿಂದ ಸಮಸ್ಯೆ ಎದುರಿಸಿದ್ದಾರೆ. ಇನ್ನು ಕೆಲವರು ರೈತರು ಈ ಸಮಸ್ಯೆ ನಿವಾರಣೆಗೆ ಟೊಮ್ಯಾಟೋ ಮಾರಾಟ ಮಾಡುವಲ್ಲಿ ಸಿಸಿಕ್ಯಾಮೆರಾ ಅಳವಡಿಸಿದ್ದಾರೆ. ಆದರೆ ಇಲ್ಲೊಬ್ಬ ರೈತ ಟೊಮ್ಯಾಟೋ ಕಾಯಲು ಏನು ಮಾಡಿದ್ದಾರೆ ಗೊತ್ತಾ? ಬೌನ್ಸರ್​ ನೇಮಿಸಿದ್ದಾರೆ.

ಟೊಮ್ಯಾಟೋ ಕಾವಲಿಗೆಂದೇ ಬೌನ್ಸರ್​..!!

ಉತ್ತರಪ್ರದೇಶದ ರೈತರೊಬ್ಬರು ಟೊಮ್ಯಾಟೋ ಕಾವಲಿಗೆಂದೇ ಇಬ್ಬರು ಬೌನ್ಸರ್ ನೇಮಿಸಿಕೊಂಡಿದ್ದು, ಅಚ್ಚರಿಗೆ ಕಾರಣರಾಗಿದ್ದಾರೆ. ಟೊಮ್ಯಾಟೋ ದರ ವಿವಿಧ ರಾಜ್ಯಗಳಲ್ಲಿ ಗಗನಕ್ಕೇರಿದ್ದು, ಕೊಳ್ಳುವವರ ಕಣ್ಣು ಕೆಂಪಾಗಿಸುತ್ತಿದೆ. ಈ ನಡುವೆ ವಾರಣಾಸಿಯ ರೈತರೊಬ್ಬರು ಮಾರುಕಟ್ಟೆಯಲ್ಲಿ ತಮ್ಮ ಟೊಮ್ಯಾಟೊ ರಕ್ಷಣೆಗೆಂದೇ ಇಬ್ಬರು ಬೌನ್ಸರ್ ಇಟ್ಟುಕೊಂಡಿದ್ದಾರೆ.

ಟೊಮ್ಯಾಟೋಗೆ 140 ರೂಪಾಯಿ

ವಾರಣಾಸಿಯಲ್ಲಿ ಕೆಜಿ ಟೊಮ್ಯಾಟೋಗೆ ಕನಿಷ್ಠ 140 ರೂಪಾಯಿ ದರವಿದ್ದು ಟೊಮ್ಯಾಟೋ ಭದ್ರತೆಗೆ ರೈತ ಬೌನ್ಸರ್ ಮೊರೆ ಹೋಗಿದ್ದಾರೆ. ಟೊಮ್ಯಾಟೊ ಕೊಳ್ಳಲು ಬಂದವರು ಮುಟ್ಟದೆ ಹಾಗೆ ಖರೀದಿ ಮಾಡುವಂತೆ, ಟೊಮ್ಯಾಟೊ ಕಳವು ಆಗದಂತೆ ಈ ಬೌನ್ಸರ್​ಗಳು ಕಾವಲು ಕಾಯ್ತಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News