Sunday, September 24, 2023
Homeಸುದ್ದಿಬೆಲೆ ಏರಿಕೆ; ಬರ್ಗರ್‌ಗೆ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್‌

ಬೆಲೆ ಏರಿಕೆ; ಬರ್ಗರ್‌ಗೆ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್‌

ನವದೆಹಲಿ: ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ಏರಿಕೆಯಾಗಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಕೇವಲ ಗ್ರಾಹಕರು, ಸಣ್ಣ-ಪುಟ್ಟ ಹೋಟೆಲ್‌ಗಳಿಗಷ್ಟೇ ಅಲ್ಲ ಆಹಾರ ಉತ್ಪನ್ನಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಂಪನಿಗಳಿಗೂ ಇದರ ಬಿಸಿ ತಟ್ಟಿದೆ.

ಹೌದು, ಬರ್ಗರ್‌ ಆಹಾರ ಉತ್ಪನ್ನ ತಯಾರಿಸುವ ಕಂಪನಿ ಮೆಕ್‌ಡೊನಾಲ್ಡ್ಸ್ (McDonald’s) ಅಚ್ಚರಿಯ ಘೋಷಣೆಯೊಂದನ್ನು ಮಾಡಿದೆ. ಬರ್ಗರ್‌ ಸೇರಿದಂತೆ ಇತರೆ ಆಹಾರ ಉತ್ಪನ್ನಗಳಿಗೆ ಟೊಮೆಟೊ ಬಳಸಲಾಗುತ್ತಿಲ್ಲ ಎಂದು ಹೇಳಿಕೊಂಡಿದೆ.

ಮೆಕ್‌ಡೊನಾಲ್ಡ್ಸ್ ದೆಹಲಿಯಲ್ಲಿರುವ ರೆಸ್ಟೋರೆಂಟ್‌ಗಳ ಹೊರಗೆ, ತನ್ನ ಆಹಾರ ಉತ್ಪನ್ನಗಳಲ್ಲಿ ಟೊಮೆಟೊ ಬಳಕೆ ಮಾಡುತ್ತಿಲ್ಲ ಎಂಬ ಸೂಚನಾಫಲಕ ಹಾಕಿಕೊಂಡಿದೆ. ಈ ದೃಶ್ಯದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರ ಆದಿತ್ಯ ಶಾ ಅವರು ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಉತ್ತಮ ಪದಾರ್ಥಗಳೊಂದಿಗೆ ಅತ್ಯುತ್ತಮ ಆಹಾರವನ್ನು ನಿಮಗೆ ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿಮಗೆ ಗುಣಮಟ್ಟದ ಟೊಮೆಟೊ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಹಾರ ಉತ್ಪನ್ನಗಳಲ್ಲಿ ಟೊಮೆಟೊ ಬಳಸುತ್ತಿಲ್ಲ ಎಂದು ಗ್ರಾಹಕರಿಗೆ ಮೆಕ್‌ಡೊನಾಲ್ಡ್ಸ್‌ ತಿಳಿಸಿದೆ.

ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ ತುಟ್ಟಿಯಾಗಿದೆ. ಉತ್ತರಾಖಂಡದಲ್ಲಿ ಕೆಜಿ ಟೊಮೆಟೊಗೆ ಬರೋಬ್ಬರಿ 250 ರೂ. ದರವಿದೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ 100 ರೂ. ಗಡಿ ದಾಟಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News