ಬೆಳ್ಮಣ್‌: ಮರ ಬಿದ್ದು ಬೈಕ್ ಸವಾರ ಸಾವು; ಅಪಾಯಕಾರಿ ಮರಗಳ ತೆರವು

ಬೆಳ್ಮಣ್‌, ಜು 8: ಬೆಳ್ಮಣ್‌ನಲ್ಲಿ ಗುರುವಾರ ರಾತ್ರಿ ಮರ ಬಿದ್ದು ಬೈಕ್ ಸವಾರ ಪಿಲಾರು ನಿವಾಸಿ ಪ್ರವೀಣ್(30) ಮೃತಪಟ್ಟ ಬೆನ್ನಲ್ಲೆ ಪೇಟೆಯ ಅಪಾಯಕಾರಿ ಮರಗಳ ತೆರವು ಕಾರ್ಯ ಶುಕ್ರವಾರ ಅರಣ್ಯ ಇಲಾಖೆಯ ಹಾಗೂ ಸ್ಥಳೀಯರ ನೆರವಿನಿಂದ ನಡೆದಿದೆ.

ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ 1ರ ಬೆಳ್ಮಣ್ ಪೇಟೆಯಲ್ಲಿ ಬೃಹತ್ ಗಾತ್ರ ಮರವೊಂದು ರಸ್ತೆಗೆ ಉರುಳಿದ ಪರಿಣಾಮ ಬೈಕ್ ಸವಾರ ಮರದಡಿಯಲ್ಲಿ ಸಿಲುಕಿಕೊಂಡಿದ್ದು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು. ದಾರಿ ಮಧ್ಯೆ ಆತ ಸಾವನ್ನಪ್ಪಿದ್ದ. ಈ ಘಟನೆಯಿಂದ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು ಸ್ಥಳೀಯರು ಮರವನ್ನು ತೆರವುಗೊಳಿಸಿ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಗುರುವಾರ ರಾತ್ರಿಯೇ ಅವಕಾಶವನ್ನು ಕಲ್ಪಿಸಿದ್ದರು.

ತಪ್ಪಿದ ಭಾರೀ ಅನಾಹುತ

ಮರ ಬೀಳುವ ವೇಳೆ ದೊಡ್ಡ ಅನಾಹುತವಾಗುವುದು ಕೂದಲೆಲೆಯಲ್ಲಿ ತಪ್ಪಿದೆ. ಮರ ಬೀಳುವ ಕೆಲವೇ ಕ್ಷಣದ ಮೊದಲು ಸ್ಕೂಟಿಯಲ್ಲಿ ಬಂದ ಸವಾರಿಬ್ಬರು ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿ ಹೋಟೆಲ್ ಗೆ ತೆರಳಿದ್ದರು ಬಳಿಕ ಮರ ಉರುಳಿದ್ದು ಸ್ಕೂಟಿ ಸಂಪೂರ್ಣ ಜಖಂಗೊಂಡಿದೆ. ಅಲ್ಲದೆ ಮರ ಬೀಳುವ ಕ್ಷಣಕ್ಕೆ ಮೊದಲು ಅಟೋ ರಿಕ್ಷಾವೊಂದು ಅದೇ ರಸ್ತೆಯಲ್ಲಿ ಸಾಗಿದೆ. ಅದರ ಹಿಂದೆ ಇದ್ದ ಬೈಕ್ ಸವಾರ ಪ್ರವೀಣ್ ಮಾತ್ರ ಮರದಡಿಗೆ ಸಿಲುಕಿ ಮೃತಪಟ್ಟಿದ್ದಾನೆ. ಪವಾಡ ರೀತಿಯಲ್ಲಿ ರಿಕ್ಷ ಹಾಗೂ ಬೈಕ್ ಸವಾರಿಬ್ಬರಿ ಪಾರಾಗಿದ್ದಾರೆ. ಹಾಗೂ ಮರ ಬಿದ್ದುರಸ್ತೆಯಲ್ಲೇಲ್ಲ ವಿದ್ಯುತ್ ಪ್ರವಾಹಿಸುತಿದ್ದ ತಂತಿ ಮೇಲೆ ಮರ ಬಿದಿದ್ದು ಕೂಡಲೇ ಸ್ಥಳಿಯರು ಮೆಸ್ಕಾಂಗೆ ತತ್ ಕ್ಷಣ ಮಾಹಿತಿ ನೀಡಿದ್ದರೆ ಇದರ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯಲ್ಲಿ ಕಬ್ಬಿನ ಜ್ಯೂಸ್‌ನ ಅಂಗಡಿ, ಫ್ಯಾನ್ಸಿ ಅಂಗಡಿ ಹಾಗೂ ಜನರಲ್ ಸ್ಟೋರ್‌ಗಳಿಗೆ ಹಾನಿಯಾಗಿದೆ.

ಮರಗಳ ತೆರವು

ರಸ್ತೆಗೆ ಉರುಳಿದ ಮರದ ತೆರವು ಕಾರ್ಯದ ಜೊತೆಯಲ್ಲಿ ಬೆಳ್ಮಣ್ ಬಸ್ಸು ನಿಲ್ದಾಣದಲ್ಲಿದ್ದ ಹಲವು ವರ್ಷಗಳ ಹಳೆಯ ಅಪಾಯಕಾರಿ ಬೃಹತ್ ಮರವನ್ನು ಕೂಡ ತೆರವು ಕಾರ್ಯ ನಡೆದಿದೆ. ಬೆಳಿಗ್ಗೆಯಿಂದ ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆಯಲ್ಲಿ ಸ್ಥಳೀಯರು ಸೇರಿಕೊಂಡು ಮರ ತೆರವಿಗೆ ಸಹಕರಿಸಿದ್ದಾರೆ. ಎರಡು ಕ್ರೇನ್, ಜೆಸಿಬಿ ಯಂತ್ರವನ್ನು ಬಳಸಿಕೊಂಡು ಮರವನ್ನು ತೆರವು ಮಾಡಲಾಗಿದೆ.

Scroll to Top