Wednesday, September 27, 2023
Homeಸುದ್ದಿಕರಾವಳಿಉಡುಪಿ : ಮಳೆ ಅಬ್ಬರ ತಗ್ಗು ಪ್ರದೇಶಗಳು ಜಲಾವೃತ : ಜನರ ಸ್ಥಳಾಂತರ

ಉಡುಪಿ : ಮಳೆ ಅಬ್ಬರ ತಗ್ಗು ಪ್ರದೇಶಗಳು ಜಲಾವೃತ : ಜನರ ಸ್ಥಳಾಂತರ

ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು, ಮಳೆಯ ತೀವೃತೆಗೆ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ನೆರೆಯಲ್ಲಿ ಸಿಲುಕಿದ ಜನರ ರಕ್ಷಣೆ ಕಾರ್ಯ ನಡೆಸಲಾಗುತ್ತಿದೆ.


ಉಡುಪಿ ಜಿಲ್ಲೆಯ ಕೊಡಂಕೂರು ಭಾಗದಲ್ಲಿ ನೆರೆ ನೀರಿನಿಂದ ಹಲವು ಕುಟುಂಬಗಳು ಅಪಾಯದಲ್ಲಿ ಸಿಲುಕಿದ್ದು ಅಗ್ನಿಶಾಮಕ ದಳಮಕ್ಕಳು ಮಹಿಳೆಯರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.


ಕಲ್ಸಂಕ, ಬೈಲಕೆರೆ,‌ ಬನ್ನಂಜೆ ಗರಡಿ ರಸ್ತೆ, ಕುಂಜಿಬೆಟ್ಟು ಭಾಗದಲ್ಲಿ ನೆರೆ ಸೃಷ್ಟಿಯಾಗಿ ಜನ ಜೀವನ‌ ಅಸ್ತವ್ಯಸ್ತ‌ಗೊಂಡಿದೆ. ಬನ್ನಂಜೆ-ಗರಡಿ ರಸ್ತೆ ಪರಿಸರದಲ್ಲಿ ಐವತ್ತಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ.


ನಿರಂತರ ಮಳೆಯಿಂದ ಇಂದ್ರಾಣಿ ನದಿ ಉಕ್ಕಿ ಹರಿಯುತ್ತಿದೆ. ಹಲವೆಡೆ ಮಳೆ‌ನೀರಿನಿಂದಾಗಿ ಕಾಲುವೆ ಬ್ಲಾಕ್ ಆಗಿ ಕೃತಕ ನೆರೆ ಸೃಷ್ಟಿಯಾಗಿದೆ. ಉಡುಪಿ ನಗರದ ತಗ್ಗು ಪ್ರದೇಶ, ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News