ಬೆಳ್ಮಣ್: ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ

ಬೆಳ್ಮಣ್: ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಜು.3ರಂದು ಜರುಗಿತು. ಸಂಘದ ಗೌರವಾಧ್ಯಕ್ಷ ಎಸ್. ಕೆ. ಸಾಲ್ಯಾನ್ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು.

ಮುಖ್ಯ ಆತಿಥಿಯಾಗಿ ಪಡುಬೆಳ್ಳೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಜಿನರಾಜ್ ಸಿ. ಸಾಲಿಯನ್ ಅವರು ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಕೊಡುವುದನ್ನು ಕಡಿಮೆ ಮಾಡಬೇಕು. ಆಧುನಿಕ ಯುಗದಲ್ಲಿ ಮಕ್ಕಳಿಗೆ ಮೊಬೈಲ್ ಎಷ್ಟು ಅಗತ್ಯವೋ ಅದರಿಂದ ಅಷ್ಟೇ ಹಾನಿಯು ಇದೆ. ನಮ್ಮ ಧರ್ಮ ಸಂಸ್ಕೃತಿಯ ಬಗ್ಗೆ ಇಂದಿನ ಪೀಳಿಗೆಗೆ ಸರಿಯಾದ ರೀತಿಯಲ್ಲಿ ಕಲಿಸಿದರೆ ಮಾತ್ರ ಮುಂದೆ ನಮ್ಮಭಾರತೀಯ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಊರಿನ ಮೂವರು ಗಣ್ಯರನ್ನು ಗೌರವಿಸಲಾಯಿತು.

ಮುಂಬೈ ಬಿಲ್ಲವರ ಅಸೋಸಿಯೇಷನ್ ಆಡಳಿತದ ಶ್ರೀ ನಾರಾಯಣ ಗುರು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಎಸ್., ಮೆಸ್ಕಾಂ ವಿಭಾಗ ಅಧಿಕಾರಿ ಪ್ರದೀಪ್, ಅಧ್ಯಕ್ಷ ಸತೀಶ್ ಕೋಟ್ಯಾನ್, ಪೂರ್ವಾಧ್ಯಕ್ಷರಾದ ಸತೀಶ್ ಎರ್ಮಾಳ್, ಗೋಪಾಲ ಎನ್.ಪೂಜಾರಿ, ಜಯರಾಂ ಸಾಲ್ಯಾನ್, ಸುಧಾಕರ್ ಕೋಟ್ಯಾನ್, ಸತೀಶ್ ಬೋಳ, ಅವಿನಾಶ್ ಬಿ., ಶಿವಕುಮಾರ್, ಕರುಣಾಕರ್, ವಿಜಯಕೃಷ್ಣ, ಕಾರ್ತಿಕ್, ಸುಭಾಷ್ ಕುಮಾರ್, ವಸಂತ ಪೂಜಾರಿ, ಯುವ ವಿಭಾಗದ ಅಧ್ಯಕ್ಷ ದೀಪಕ್ ಸಾಲ್ಯಾನ್, ಕಾರ್ಯದರ್ಶಿ ವಿಶಾಲ್ ಜೆ. ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ರಮಿತಾ ರವಿ ಪೂಜಾರಿ, ಕಾರ್ಯದರ್ಶಿ ಲೀಲಾ ಎನ್. ಪೂಜಾರಿ, ಉಪಸ್ಥಿತರಿದ್ದರು.

ಸತೀಶ್ ಕೋಟ್ಯಾನ್ ಸ್ವಾಗತಿಸಿ, ಸರಿತಾ ದಿನೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾಸನ್ಮಾನಿತರ ಪರಿಚಯ ಮಾಡಿ ಕಾರ್ಯದರ್ಶಿ ದಿನೇಶ್ ಸುವರ್ಣ ವಂದಿಸಿದರು.

You cannot copy content from Baravanige News

Scroll to Top