Wednesday, April 24, 2024
Homeಸುದ್ದಿಕುತ್ಯಾರು:ಶಿರ್ವ ಶ್ರೀ ವಿಶ್ವಬ್ರಾಹ್ಮಣ ಶ್ರೀ ವಿಶ್ವ ಸಂಗಮ ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಕುತ್ಯಾರು...

ಕುತ್ಯಾರು:ಶಿರ್ವ ಶ್ರೀ ವಿಶ್ವಬ್ರಾಹ್ಮಣ ಶ್ರೀ ವಿಶ್ವ ಸಂಗಮ ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಕುತ್ಯಾರು ಶ್ರೀಮಠದ ಗೋವುಗಳಿಗೆ ಹಿಂಡಿ ವಿತರಣೆ

ಶಿರ್ವ-ಕುತ್ಯಾರು:ಶಿರ್ವ ಶ್ರೀ ವಿಶ್ವಬ್ರಾಹ್ಮಣ ಶ್ರೀ ವಿಶ್ವ ಸಂಗಮ ಶಿರ್ವ ಮತ್ತು ಮಹಿಳಾ ಬಳಗದ ವತಿಯಿಂದ ಕುತ್ಯಾರು ಶ್ರೀಮಠದ ಗೋವುಗಳಿಗೆ ಸುಮಾರು ಇನ್ನೂರು ಕಿಲೋ ಗಿಂತಲೂ ಹೆಚ್ಚು ಹಿಂಡಿ ಮತ್ತು ಹಸಿರು ಆಹಾರವನ್ನು ಅಧ್ಯಕ್ಷರಾದ ಶ್ರೀ ಉಮೇಶ್ ಆಚಾರ್ಯರು ಗೋಮಾತೆಗೆ ಸಮರ್ಪಿಸಿದರು.

ನಮ್ಮ ಸಂಸ್ಥೆಗೆ ಸಂಪತ್ತು ಹರಿದುಬರಲಿ ಇನ್ನೂ ಮುಂದಕ್ಕೂ ಗೋಸೇವೆ ಸೇವೆ ಮಾಡುವ ಅವಕಾಶ ದೊರೆಯಲಿ ಎಂದು ಮಠಕ್ಕೆ ಗೋವಿಗಾಗಿ ಮೇವು ಸಮರ್ಪಣ ಸಮಾರಂಭದಲ್ಲಿ ನುಡಿದರು

ಶ್ರೀಮಠದ ಗುರುಗಳು ಸದಸ್ಯರಿಗೆ ಫಲಮಂತ್ರಾಕ್ಷತೆ ಯನ್ನು ನೀಡಿ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿಯಾಗಲಿ, ಗುರು ಆಶೀರ್ವಾದದೊಂದಿಗೆ ಗೋಮಾತೆಯ ಆಶೀರ್ವಾದ ಎಲ್ಲರಿಗೂ ಲಭಿಸಲಿ ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಠದ ಪರಿಯಾವರಣ ಅಧ್ಯಕ್ಷರಾದ ಶ್ರೀ ಸುಂದರ್ ಆಚಾರ್ಯ ಬೆಳುವಾಯಿ, ಕಾರ್ಯದರ್ಶಿ ಸುರೇಶ್ ಉಡುಪಿ, ಶ್ರೀಮಠದ ಶ್ರೀ ಲೋಲಾಕ್ಷ ಆಚಾರ್ಯ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ದಶಮಾನೋತ್ಸವದ ಸಂಚಾಲಕ ಶ್ರೀ ಪ್ರಶಾಂತ ಆಚಾರ್ಯ ಮತ್ತು ಶ್ರೀ ಪ್ರಿತಮ್ ಆಚಾರ್ಯ ಇವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಸುರೇಶಾಚಾರ್ಯ ಮಹಿಳಾ ಬಳಗದ ಅಧ್ಯಕ್ಷೆ ಶ್ರೀಮತಿ ಸುಮತಿ ಭಾಸ್ಕರಾಚಾರ್ಯ ಕಾರ್ಯದರ್ಶಿ ಕ ಶ್ರೀಮತಿ ಪ್ರೀತಿ ಉಮೇಶ್ ಆಚಾರ್ಯ ಮತ್ತು ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು ಸಂಸ್ಥೆಯ ಕಾರ್ಯದರ್ಶಿ ಶ್ರೀ ಮಾಧವಾಚಾರ್ಯ ಎಲ್ಲರಿಗೂ ಧನ್ಯವಾದ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News