ಶಿರ್ವ, ಜು.02: ಬಂಟಕಲ್ಲು ಸಮೀಪದ ಬಿ.ಸಿ.ರೋಡ್ ನಿವಾಸಿ ಪುನೀತ್ ತೆಂಡುಲ್ಕರ್ ಪ್ರತಿಷ್ಠಿತ ಸಾವಿತ್ರಿಬಾಯಿ ಪುಲೆ ಪುಣಿ ಯುನಿವರ್ಸಿಟಿಯಿಂದ 2020-21ರಲ್ಲಿ ನಡೆದ ಕ್ರೆಡಿಟ್ ಬೇಸ್ಟ್ ಸೆಮಿಸ್ಟರ್ ಸಿಸ್ಟಮ್ ಸ್ನಾತಕೋತ್ತರ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ವಿಷಯದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಬ್ಯಾಂಕ್ ಗಳಿಸಿದ್ದು, ಇವರಿಗೆ ಡಾ.ಎಸ್.ಎಫ್. ಪಾಟೀಲ್ ಸ್ವರ್ಣ ಪದಕ ಹಾಗೂ ದಿ.ಅನಂತ ಕೇಲ್ಕರ್ ಸ್ವರ್ಣ ಪದಕವನ್ನು ಶನಿವಾರ ಪುಣಿ ಯುನಿವರ್ಸಿಟಿಯಲ್ಲಿ ಜರುಗಿದ ಪದವಿ ಪ್ರದಾನ ಸಮಾರಂಭದಲ್ಲಿ ಯುನಿವರ್ಸಿಟಿಯ ಕುಲಪತಿ ಮಹಾರಾಷ್ಟ್ರದ ರಾಜ್ಯಪಾಲ ರಮೇಶ್ ಬೈಸ್ ಪ್ರದಾನ ಮಾಡಿದರು.
ಮಹಾರಾಷ್ಟ್ರ ಸರ್ಕಾರದ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವ ಚಂದ್ರಕಾಂತ್ ಪಾಟೀಲ್, ಉಪಕುಲಪತಿ. ಡಾ.ಸುರೇಶ್ ಗೋಸವಿ, ಕೇಂದ್ರ ಸರ್ಕಾರದ ಪುನೀತ್ ತೆಂಡುಲ್ಕರ್ ಮಹಾರಾಷ್ಟ್ರ ರಾಜ್ಯಪಾಲದಿಂದ ಚಿನ್ನದ ಪದಕ ಸಹಿತ ಪ್ರಶಸ್ತಿ ಸ್ವೀಕರಿಸಿದರು.

ಡಿಪಾರ್ಟ್‌ಮೆಂಟ್ ಆಫ್ ಬಯೋಟೆಕ್ನಾಲಾಜಿ ಮಿನಿಸ್ಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಾಜಿ ವಿಭಾಗದ ಕಾರ್ಯದರ್ಶಿ ಡಾ. ರಾಜೇಶ್ ಗೋಖಲೆ ಉಪಸ್ಥಿತರಿದ್ದರು.

ಪುನೀತ್ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಗಳಿಸಿ ಮಂಗಳೂರು ಯುನಿವರ್ಸಿಟಿಯಿಂದ 5ನೇ ರಾಂಕ್ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು – ಕಲ್ಯಾಣಪುರ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆ, ಪ್ರೌಢ ಶಿಕ್ಷಣವನ್ನು ಮೌಂಟ್ ರೋಸರಿ ಅಂಗ್ಲ ಮಾಧ್ಯಮ ಶಾಲೆ, ಪಿಯುಸಿ ಶಿಕ್ಷಣವನ್ನು ಶಿರ್ವ ಸಂತ ಮೇರಿ ಪ.ಪೂ.ಕಾಲೇಜಿನಲ್ಲಿ ಪಡೆದಿದ್ದಾರೆ. ಇವರು ಶಿರ್ವ ಸಂತ ಮೇರಿ ಕಾಲೇಜಿನ ಹಿರಿಯ ಹಿಂದಿ ಉಪನ್ಯಾಸಕ ಕೊಡಿಬೆಟ್ಟು ಡಾ.ವಿಟ್ಠಲ್ ನಾಯಕ್ ಮತ್ತು ಅಜ್ಜರಕಾಡು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಹಿಂದಿ ಉಪನ್ಯಾಸಕಿ ವಸಂತಿ ದಂಪತಿ ಪುತ್ರ