Sunday, September 24, 2023
Homeಸುದ್ದಿದ.ಕ: ಮೂರನೇ ವ್ಯಕ್ತಿಯ ಮೆಸೇಜ್, ಕಾಲ್ ನಿಂದಾಗಿ ಸುಂದರ ಕುಟುಂಬವೇ ನಾಶ; ಕ್ಷುಲ್ಲಕ ಕಾರಣಕ್ಕೆ ಬಲಿಯಾದ...

ದ.ಕ: ಮೂರನೇ ವ್ಯಕ್ತಿಯ ಮೆಸೇಜ್, ಕಾಲ್ ನಿಂದಾಗಿ ಸುಂದರ ಕುಟುಂಬವೇ ನಾಶ; ಕ್ಷುಲ್ಲಕ ಕಾರಣಕ್ಕೆ ಬಲಿಯಾದ ಖಾಸಗಿ ಬಸ್ ಡ್ರೈವರ್..!!!

ವಿಟ್ಲ: ಗಂಡ-ಹೆಂಡತಿ ಇಬ್ಬರು ಆತ್ಮಹತ್ಯೆಗೆ ಯತ್ನಿಸಿ, ಪತಿ ಸಾವನ್ನಪ್ಪಿ ಪತ್ನಿ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಅನಂತಾಡಿಯ ಬಾಕಿಲದಲ್ಲಿ ನಡೆದಿದ್ದು, ಘಟನೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಪ್ರತಾಪ್ (33 ರವರ ಸಹೋದರ ಪ್ರದೀಪ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲ ಎಂಬಲ್ಲಿ ಪ್ರತಾಪ್‌ ಎಂಬವರು ತನ್ನ ಪತ್ನಿಯೊಂದಿಗೆ ವಾಸವಾಗಿದ್ದು, ಪತ್ನಿ ಯಾವುದೋ ವ್ಯಕ್ತಿಯೊಂದಿಗೆ ಕೆಲವು ಸಮಯದಿಂದ ಮೊಬೈಲ್‌ ಪೋನ್‌ನಿಂದ ಮೆಸೆಜ್‌ ಮಾಡುತ್ತಿದ್ದುದರಿಂದ ಗಂಡ-ಹೆಂಡಿತಿಯೊಳಗೆ ಆಗಾಗ ಜಗಳವಾಗುತ್ತಾ ಸರಿಯಾಗಿ ಸಂಸಾರ ನಡೆಯದೆ ಇದ್ದುದರಿಂದ ಪ್ರತಾಪ್‌ ರವರ ಮಾನಸಿಕ ನೆಮ್ಮದಿ ಹಾಳಾಗಿದ್ದು ಇದೇ ಕಾರಣದಿಂದ ಜು.1 ರಂದು ಮನೆಯ ಊಟದ ಕೋಣೆಯ ಸಿಲಿಂಗ್‌ ಫ್ಯಾನಿಗೆ ನೈಲಾನ್‌ ಸಿರೇಯನ್ನು ಕಟ್ಟಿ ಅದರ ಇನ್ನೊಂದು ತುದಿಯನ್ನು ನೇಣು ಕುಣಿಕೆಯನ್ನಾಗಿ ಮಾಡಿಕೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದನ್ನು ಕಂಡ ಅವರ ಪತ್ನಿ ಇಸ್ತ್ರಿಪೆಟ್ಟಿಗೆಯ ವೈಯರ್‌ನ್ನು ಅದೇ ಫ್ಯಾನಿಗೆ ಕಟ್ಟಿ ಅದರ ಇನ್ನೊಂದು ತುದಿಯನ್ನು ನೇಣು ಕುಣಿಕೆಯನ್ನು ಮಾಡಿಕೊಂಡು ಕುತ್ತಿಗೆಗೆ ನೇಣು ಹಾಕಿಕೊಂಡ ವಿಚಾರವನ್ನು ತಿಳಿದ ನೆರೆಕರೆಯವರು ಪುತ್ತೂರು ಆಸ್ಪತ್ರಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದಾಗ ಪ್ರತಾಪ ರವರು ಮೃತಪಟ್ಟಿದ್ದು ವೀಣಾರವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಪ್ರತಾಪ್‌ರವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News