Saturday, July 27, 2024
Homeಸುದ್ದಿಚಲಿಸುತ್ತಿದ್ದ ಬಸ್‌ನಲ್ಲಿ ಮಹಿಳೆ ಜೊತೆ ಸೆಕ್ಸ್‌; ಕೆಲಸ ಕಳೆದುಕೊಂಡ ಕಂಡೆಕ್ಟರ್‌

ಚಲಿಸುತ್ತಿದ್ದ ಬಸ್‌ನಲ್ಲಿ ಮಹಿಳೆ ಜೊತೆ ಸೆಕ್ಸ್‌; ಕೆಲಸ ಕಳೆದುಕೊಂಡ ಕಂಡೆಕ್ಟರ್‌

ಬಸ್‌ ಕಂಡಕ್ಟರ್‌ ಚಲಿಸುವ ಬಸ್‌ನಲ್ಲಿಯೇ ಯುವತಿಯ ಜೊತೆ ಸೆಕ್ಸ್‌ ಮಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹತ್ರಾಸ್‌ ಡಿಪೋದ ಬಸ್‌ ಲಕ್ನೋಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕಂಡಕ್ಟರ್‌ ವರ್ತನೆಯ ಬಗ್ಗೆ ಅನುಮಾನ ಹೊಂದಿದ್ದ ಕೆಲ ಪ್ರಯಾಣಿಕರು ಘಟನೆಯ ವೀಡಿಯೋವನ್ನು ರೆಕಾರ್ಡ್‌ ಮಾಡಿ ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಇದರ ಬೆನ್ನಲ್ಲಿಯೇ ವಿಡಿಯೋ ವೈರಲ್‌ ಆಗಿದೆ.

ವೀಡಿಯೋ ಕ್ಲಿಪ್‌ನಲ್ಲಿ ಪ್ರಯಾಣಿಕನೊಬ್ಬ, ಕಂಡಕ್ಟರ್‌ ಹಾಗೂ ಯುವತಿ ಇಬ್ಬರೂ ಕುಳಿತಿರುವ ಕಡೆ ಬಂದಿದ್ದಾರೆ. ಈ ವೇಳೆ ಕಂಡಕ್ಟರ್‌ ಹಾಗೂ ಯುವತಿ ಸೀಟ್‌ನಲ್ಲಿ ಬೆಡ್‌ಶೀಟ್‌ ಹಾಕಿಕೊಂಡು ಸೆಕ್ಸ್‌ ಮಾಡುತ್ತಿರುವುದು ಕಂಡಿದೆ. ಇದನ್ನು ಗಮನಿಸಿದ ಕಂಡಕ್ಟರ್ ಕೋಪಗೊಂಡು ಪ್ರಯಾಣಿಕರ ಮೊಬೈಲ್ ಕಸಿದುಕೊಳ್ಳಲು ಮುಂದಾಗಿದ್ದಾರೆ. ಇದು ಅವನ ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಬಸ್‌ನಲ್ಲಿಯೇ ಕಂಡಕ್ಟರ್ ಸೆಕ್ಸ್‌ನಲ್ಲಿ ತೊಡಗಿರುವುದನ್ನು ಪ್ರಯಾಣಿಕರು ಕೆಲಕಾಲ ಗಮನಿಸಿದ್ದಾರೆ. ಆದರೆ, ಇದು ಆತನ ಗಮನಕ್ಕೆ ಬಂದಿರಲಿಲ್ಲ.

ವಾಗ್ವಾದದ ವೇಳೆ ಒಂದು ಗಂಟೆಗೂ ಹೆಚ್ಚು ಕಾಲ ಈತ ಸೆಕ್ಸ್‌ ನಡೆಸುತ್ತಿದ್ದ ಎಂದು ಪ್ರಯಾಣಿಕರೊಬ್ಬರು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆಲಂಬಾಗ್ ತಲುಪಿದ ನಂತರ ಬಸ್ ಕಂಡಕ್ಟರ್ ವಿರುದ್ಧ ದೂರು ನೀಡಲು ನಿರ್ಧಾರ ಮಾಡಿದ್ದರು. ಆದರೆ, ಕಾರಣಾಂತರಗಳಿಂದ ದೂರು ಕೊಡಲು ಸಾಧ್ಯವಾಗಿರಲಿಲ್ಲ. ಸದ್ಯ ವೀಡಿಯೋ ವೈರಲ್ ಆದ ಬೆನ್ನಲ್ಲೇ ಕಂಡಕ್ಟರ್‍ನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎನ್ನಲಾಗಿದೆ.

ಹಲವಾರು ಪ್ರಯಾಣಿಕರು ಕಂಡಕ್ಟರ್‌ನ ದುರ್ವರ್ತನೆಯನ್ನು ಗಮನಿಸಿ ಘಟನೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದರು. ಸ್ಥಳೀಯ ವರದಿಗಳ ಪ್ರಕಾರ ಈ ಘಟನೆಯು 10 ದಿನಗಳ ಹಿಂದೆ ಸಂಭವಿಸಿದೆ ಎಂದು ವರದಿಯಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News