ಉಡುಪಿ, ಜು.1: ಕೃಷ್ಣನಗರಿ ಉಡುಪಿಯಲ್ಲಿ ಮೂರು ಕರುಗಳನ್ನು ಕಟುಕರಿಂದ ರಕ್ಷಣೆ ಮಾಡಲಾಗಿದ್ದು ಗೋಶಾಲೆಗೆ ಕಳಿಸಿಕೊಡಲಾಗಿದೆ.
ಜಿಲ್ಲೆಯ ಆದಿ ಉಡುಪಿಯ ಸಂತೆ ಮಾರ್ಕೆಟ್ ನ ಬಳಿ ಈ ಮೂರು ಕರುಗಳನ್ನು ಗೋವುಗಳ್ಳರಿಂದ ರಕ್ಷಿಸಲ್ಪಟ್ಟಿವೆ.
ಇಂದು ಶನಿವಾರ ಬೆಳಗ್ಗಿನ ಜಾವ ಸುಮಾರು 2 ಗಂಟೆಯ ವೇಳೆ ಕರುಗಳ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ತಿಳಿದು ಬಂದಿದೆ.
ಸ್ಥಳೀಯ ನಿವಾಸಿಯಾಗಿರುವ ಗುರುರಾಜ್ ಎಂಬವರಿಗೆ ಗೋ ಕಳ್ಳರು ಕರುಗಳನ್ನು ಸಾಗಿಸ್ತಾ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಅವರು ಕರುಗಳನ್ನು ರಕ್ಷಣೆ ಮಾಡಿ ಮೇವು ನೀಡಿ ಆರೈಕೆ ಮಾಡಿದ್ದಾರೆ. ಬಳಿಕ ಈ ವಿಚಾರವನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದಿದ್ದಾರೆ.
ತಕ್ಷಣ ಒಳಕಾಡು ಅವರು ಅಲ್ಲಿಯ ತಂಡದವರಿಂದ ಕರುಗಳನ್ನು ಗೋಶಾಲೆಗೆ ಕಳುಹಿಸಿಕೊಟ್ಟಿದ್ದಾರೆ. ಗೋಶಾಲೆಯ ಮೇಲ್ವಿಚಾರಕ ಇಂದುಶೇಖರ್ ಗೋಕರುಗಳಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.