ಯುವತಿಯನ್ನು 20 ದಿನ ಲಾಡ್ಜ್ ನಲ್ಲಿರಿಸಿ ದೈಹಿಕ ಸಂಪರ್ಕ; ವಿವಾಹಿತ ಆರೆಸ್ಟ್..!!!

ಮಂಗಳೂರು, ಜೂ.30: ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಹೋಟೆಲ್ ರೂಂನಲ್ಲಿ 20 ದಿನಗಳ ದೈಹಿಕ ಸಂಪರ್ಕ ಬೆಳೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಸಂತ್ರಸ್ತ ಯುವತಿಯು ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಅನ್ವಯ ಆರೋಪಿ ಕಡಬ ಮೂಲದ ಅನೀಶ್ ರೆಹಮಾನ್ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿದ್ದಾರೆ.

ಅರೊಪಿಯು ಹೋಟೆಲ್ ಗಳಲ್ಲಿ ಬಿಲ್ ಕೊಡದೆ ಪರಾರಿಯಾಗುವ ಚಟ ಹೊಂದಿದ್ದು ಆತನನ್ನು ಸಿಬಂದಿ ಹಿಡಿದು ಹಾಕಿದ್ದರು. ಬಳಿಕ ಯುವತಿ ಬಳಿಯಿದ್ದ ಲ್ಯಾಪ್‌ಟಾಪ್ ಅನ್ನು ಹೊಟೇಲಿನಲ್ಲಿ ಅಡವಿಟ್ಟು ಹೊರಬಂದಿದ್ದ. ಲ್ಯಾಪ್‌ಟಾಪ್ ಕಾಣದಾಗಿದ್ದರಿಂದ ಯುವತಿ ಬಳಿ ಮನೆಯವರು ಪ್ರಶ್ನೆ ಮಾಡಿದ್ದರು. ಆ ಬಳಿಕ ಮನೆಯವರಿಗೆ ಇವರ ವಿಷಯ ತಿಳಿದು ಅನೀಶ್ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಆತನಿಗೆ ಮದುವೆಯಾಗಿರುವ ವಿಷಯ ತಿಳಿದುಬಂದಿತ್ತು.

ಬಳಿಕ ಮಹಿಳಾ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅನೀಶ್ ವಿರುದ್ಧ ಈ ಹಿಂದೆ ಗಾಂಜಾ ಸೇವನೆ ಪ್ರಕರಣದಲ್ಲಿ ಬಂಧಿತನಾಗಿದ್ದು ಕಾವೂರು ಠಾಣೆಯಲ್ಲಿ ಪ್ರಕರಣ ಎದುರಿಸುತ್ತಿದ್ದಾನೆ.

ಆರೋಪಿ ಅನೀಶ್ ರೆಹಮಾನ್ ವಿರುದ್ಧ ಕಾವೂರು ಠಾಣೆಯಲ್ಲಿ NDPS ಅಡಿಯಲ್ಲೂ ಪ್ರಕರಣ ದಾಖಲಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

You cannot copy content from Baravanige News

Scroll to Top