ಮದುವೆಯಾದ ಮರುದಿನವೇ ಮಗುವಿಗೆ ಜನ್ಮ ನೀಡಿದ ನವವಧು..!!!

ಲಕ್ನೋ: ಮದುವೆ ಆದ ಮರುದಿನವೇ ನವವಧು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಸಮೀಪ ಇರುವ ಹಳ್ಳಿಯೊಂದರಲ್ಲಿ ನಡೆದಿದೆ.

ತೆಲಂಗಾಣದ ಸಿಕಂದರಾಬದ್ ಮೂಲದ ವಧುವನ್ನು ಗ್ರೇಟರ್ ನೋಯ್ಡಾದ ಸಮೀಪದ ಹಳ್ಳಿಯೊಂದರ ವರನಿಗೆ ಕೊಟ್ಟು ಜೂನ್ 26 ರಂದು ವಿವಾಹವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ವಿವಾಹದ ದಿನ ರಾತ್ರಿ ವಧು ಹೊಟ್ಟೆ ನೋವು ಎಂದು ಅಳಲು ಪ್ರಾರಂಭಿಸಿದ್ದಳು. ಹೀಗಾಗಿ ವರನ ಕುಟುಂಬಸ್ಥರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ಬಳಿಕ ವೈದ್ಯರು 7 ತಿಂಗಳ ಗರ್ಭಿಣಿಯೆಂದು ಹೇಳಿದ್ದಾರೆ.

ವೈದ್ಯರ ಈ ಮಾತನ್ನು ಕೇಳುತ್ತಿದ್ದಂತೆ ವರನ ಕಡೆಯವರು ಕಕ್ಕಾಬಿಕ್ಕಿಯಾಗಿದ್ದಾರೆ. ಏನು ಮಾಡುವುದೆಂದು ಗೊತ್ತಾಗಿಲ್ಲ. ಮರುದಿನವೇ ವಧು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ವರನ ಕಡೆಯವರು ಆಕೆಯ ತವರು ಮನೆಯವರನ್ನು ಕರೆಸಿ ಸಿಕಂದರಾಬಾದ್ಗೆ ಕಳುಹಿಸಿಕೊಟ್ಟು ಸಂಬಂಧವನ್ನು ಮುರಿದುಕೊಂಡಿದ್ದಾರೆ.

ಇನ್ನು ಮದುವೆಗೆ ಮೊದಲೇ ವಧುವಿನ ಹೊಟ್ಟೆ ದೊಡ್ಡದಾಗಿ ಕಾಣಿಸಿದ್ದರ ಬಗ್ಗೆ ವರನ ಕಡೆಯವರು ಟೀಕೆ ವ್ಯಕ್ತಪಡಿಸಿದ್ದರು. ಆಗ ವಧುವಿಗೆ ಕಿಡ್ನಿಯಲ್ಲಿ ಕಲ್ಲಿದ್ದವು ಅವುಗಳನ್ನು ತೆಗೆಸಿದ್ದಕ್ಕಾಗಿ ಹಾಗೇ ಕಾಣುತ್ತಿದೆಂದು ಸಬೂಬು ಹೇಳಿದ್ದರು. ಇನ್ನು ಎರಡು ಕುಟುಂಬಗಳು ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲು ಮಾಡಿಲ್ಲವೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

You cannot copy content from Baravanige News

Scroll to Top