ಚೂಯಿಂಗ್ ಗಮ್‌ ತಿನ್ನುತ್ತೀರಾ, ಪೆಪ್ಸಿ, ಕೋಕ್‌ ಕುಡಿಯುತ್ತೀರಾ..? ಎಚ್ಚರ..!!

ನವದೆಹಲಿ, ಜೂ 29: ಪೆಪ್ಸಿ, ಕೋಕ್‌ ಸೇರಿ ಸಾಫ್ಟ್‌ ಡ್ರಿಂಗ್ಸ್‌ ಮತ್ತು ಚೂಯಿಂಗ್‌ ಗಮ್‌ಗಳಲ್ಲಿ ಬಳಸುವ ಕೃತಕ ಸಿಹಿಕಾರಕ ಆಸ್ಪರ್ಟೇಮ್ ಮನುಷ್ಯರಿಗೆ ಕ್ಯಾನ್ಸರ್‌ ಉಂಟು ಮಾಡುವ ವಸ್ತು ಎಂದು ಪಟ್ಟಿ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಕ್ಯಾನ್ಸರ್ ಸಂಶೋಧನಾ ವಿಭಾಗವಾದ ಇಂಟರ್‌ ನ್ಯಾಷನಲ್‌ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್(IARC) ಜುಲೈ ತಿಂಗಳಲ್ಲಿ ಆಸ್ಪರ್ಟೇಮ್ ಕ್ಯಾನ್ಸರ್‌ ಕಾರಕ ಎಂದು ಘೋಷಿಸುವುದಾಗಿ ವರದಿಯಾಗಿದೆ.

ಕಾರ್ಸಿನೋಜೆನ್ ಎನ್ನುವುದು ಜೀವಂತ ಅಂಗಾಂಶಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವಿರುವ ವಸ್ತುವಾಗಿದೆ. ಆಸ್ಪರ್ಟೇಮ್ ಅನ್ನು ಸಂಭವನೀಯ ಕಾರ್ಸಿನೋಜೆನ್ ಎಂದು ಘೋಷಣೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ಸಿದ್ಧತೆ ನಡೆಸಿದೆ. ಅಸ್ಪರ್ಟೇಮ್ ಸಕ್ಕರೆ ಬದಲಿಯಾಗಿ ಬಳಸುವ ಒಂದು ಕೃತಕವಲ್ಲದ ಸ್ಯಾಕರೈಡ್ ಸಿಹಿಕಾರಕ. ಆಸ್ಪರ್ಟೇಮ್ ಹೊಂದಿರುವ ಉತ್ಪನ್ನವನ್ನು ಒಬ್ಬ ವ್ಯಕ್ತಿಯು ಎಷ್ಟು ಸುರಕ್ಷಿತವಾಗಿ ಬಳಸಬಹುದು ಎಂಬುದು ಇನ್ನೂ ತಿಳಿದಿಲ್ಲ.ಭಾರತ ಸೇರಿ 90ಕ್ಕೂ ಹೆಚ್ಚು ದೇಶಗಳು ಇದರ ಬಳಕೆಯನ್ನು ಅನುಮೋದಿಸಿವೆ.

Scroll to Top