Saturday, July 27, 2024
Homeಸುದ್ದಿಕರಾವಳಿಕರಾವಳಿಯಲ್ಲಿ ಸುಳ್ಳುಸುದ್ದಿ ಹರಡಿ ಬಿಜೆಪಿ ಗೆಲುವು - ಸೊರಕೆ

ಕರಾವಳಿಯಲ್ಲಿ ಸುಳ್ಳುಸುದ್ದಿ ಹರಡಿ ಬಿಜೆಪಿ ಗೆಲುವು – ಸೊರಕೆ

ಉಡುಪಿ : ಬಿಜೆಪಿ ವಿರೋಧಿ ಜನಾಕ್ರೋಶದ ಅಲೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮರಳಿ ಗದ್ದುಗೆ ಹಿಡಿದಿದ್ದು ಇದು ಪಕ್ಷದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಬಿಜೆಪಿ ಆಡಳಿತದಲ್ಲಿ ನಡೆದ ಬೆಲೆ ಏರಿಕೆ, ಅತಿಯಾದ ಭ್ರಷ್ಟಾಚಾರ ನೈತಿಕತೆಯ ದಿವಾಳಿತನದಿಂದ ಜನತೆ ರೋಸಿ ಹೋಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರೂ ಬಿಜೆಪಿಗೆ ತನ್ನ ತಪ್ಪಿನ ಅರಿವಾಗಿಲ್ಲ. ಪಕ್ಷದ ಮಹಾತ್ಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಟಾನದೊಂದಿಗೆ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ನಾವು ಸನ್ನದ್ಧರಾಗಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.


ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಮಾತನಾಡುತ್ತಾ ರಾಜ್ಯಾದ್ಯಾಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದರೂ ಕರಾವಳಿ ಪ್ರದೇಶದಲ್ಲಿ ಬಿಜೆಪಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಮೇಲ್ಗೆ ಸಾಧಿಸಿತು. ನಾವು ಪಕ್ಷದ ಗೆಲುವಿನ ತಂತ್ರಗಾರಿಕೆಯಲ್ಲಿ ಎಡವಿರುವುದೂ ಹಿನ್ನಡೆಯಾಗಿರಬಹುದು. ಕರಾವಳಿ ಪ್ರದೇಶದಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ಸನಿಹ ಬಂದರೂ ಕೊನೆಯ ಹಂತದಲ್ಲಿ ಬಿಜೆಪಿ ಜನರಲ್ಲಿ ಧಾರ್ಮಿಕ ಭಾವನೆ ಕೆದಕಿ ಗೆಲುವನ್ನು ತನ್ನದಾಗಿಸಿಕೊಂಡಿತು. ಮುಂಬರುವ ಚುನಾವಣೆಯಲ್ಲಿ ಜನಜಾಗೃತಿಯ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡೋಣ ಎಂದರು.

ಮಾಜಿ ಸಚಿವರಾದ ಅಭಯಚಂದ್ರ ಜೈನ್ ಪಕ್ಷದ ಮುಖಂಡರಾದ ಎಮ್.ಎ.ಗಫೂರ್, ಮುನಿಯಾಲ್ ಉದಯಕುಮಾರ್ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಬಿ.ನರಸಿಂಹ ಮೂರ್ತಿ, ನೀರೆಕೃಷ್ಣ ಶೆಟ್ಟಿ, ಭುಜಂಗ ಶೆಟ್ಟಿ, ದಿನೇಶ್ ಹೆಗ್ಡೆ, ಮೊಳವಳ್ಳಿ, ಕುಶಲ ಶೆಟ್ಟಿ, ಬಿಪಿನ್ ಚಂದ್ರಪಾಲ್ ನಕ್ರೆ, ಹಿರಿಯಣ್ಣ , ಮಹಾಬಲ ಕುಂದರ್, ಇಸ್ಮಾಯಿಲ್ ಅತ್ರಾಡಿ, ಪ್ರದೀಪ್ ಕುಮಾರ್ ವಂಡ್ಸೆಯವರು ಪಕ್ಷದ ಸಂಘಟನೆ ಹಾಗೂ ಕರಾವಳಿ ಪ್ರದೇಶದಲ್ಲಿ ಪಕ್ಷದ ಸೋಲಿನ ಆತ್ಮವಲೋಕನಗೈದರು.

ಇತ್ತೀಚೆಗೆ ನಿಧನ ಹೊಂದಿದ ಪಕ್ಷದ ಮುಖಂಡರಾದ ಭಾಸ್ಕರ ಕೋಟ್ಯಾನ್, ಸದಾಶಿವ ನಾಯಕ್ ಬ್ರಹ್ಮಾವರ, ನಾರಾಯಣ ದೇವಾಡಿಗ, ನಾರಾಯಣ ಪೂಜಾರಿಯವರ ಬಗ್ಗೆ ಭುಜಂಗ ಶೆಟ್ಟಿ, ಅಣ್ಣಯ್ಯ ಸೇರಿಗಾರ್, ಮದನ್ ಕುಮಾರ್ ರವರು ನುಡಿ ನಮನ ಸಲ್ಲಿಸಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಡಿ.ಆರ್.ರಾಜು, ನವೀನ್ ಚಂದ್ರ ಶೆಟ್ಟಿ, ಗೀತಾ ವಾಗ್ಳೆ, ಕೃಷ್ಣಮೂರ್ತಿ ಕಾರ್ಕಳ, ಹಬೀಬ್ ಆಲಿ, ಸರಸು ಬಂಗೇರ, ಬ್ಲಾಕ್ ಅಧ್ಯಕ್ಷರುಗಳಾದ ಹರಿಪ್ರಸಾದ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ವಂಡ್ಸೆ, ಸಂತೋಷ ಕುಲಾಲ್, ಮದನ್ ಕುಮಾರ್, ರಮೇಶ್ ಕಾಂಚನ್, ಡಾ|ಸುನಿತಾ ಶೆಟ್ಟಿ, ದೇವಕಿ ಸಣ್ಣಯ್ಯ ರೋಶನಿ ಒಲಿವರಾ, ಜ್ಯೋತಿ ಹೆಬ್ಬಾರ್, ಶಬ್ಬಿರ್ ಅಹ್ಮದ್, ಮುರಲಿ ಶೆಟ್ಟಿ, ಪ್ರಶಾಂತ ಜತ್ತನ್ನ,ದಿವಾಕರ್ ಕುಂದರ್, ಪ್ರಖ‍್ಯಾತ ಶೆಟ್ಟಿ, ಯತೀಶ್ ಕರ್ಕೇರ, ಹರೀಶ್ ಶೆಟ್ಟಿ ಪಾಂಗಾಳ, ಶಶಿಧರ ಶೆಟ್ಟಿ ಎಲ್ಲೂರು, ಜಯ ಕುಮಾರ್, ಕೀರ್ತಿ ಶೆಟ್ಟಿ, ರೋಶನ್ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಕಿರಣ್ ಹೆಗ್ಡೆ, ಬಾಲಕೃಷ್ಣ ಪೂಜಾರಿ, ಆನಂದ ಪೂಜಾರಿ, ವಿನಯ ಬಲ್ಲಾಳ್, ದೀಪಕ್ ಕೋಟ್ಯಾನ್, ವೈ.ಸುಕುಮಾರ್, ಪ್ರಸನ್ನ ಕುಮಾರ್, ವಿಶ್ವಾಸ್ ಶೆಟ್ಟಿ, ಉಪಸ್ಥಿತರಿದ್ದರು.

ವಕ್ತಾರ ಭಾಸ್ಕರ ರಾವ್, ಕಿದಿಯೂರು ಕಾರ್ಯಕ್ರಮ ನಿರ್ವಹಿಸಿ ಪ್ರ.ಕಾರ್ಯದರ್ಶಿ, ಹರೀಶ್ ಕಿಣಿ ಧನ್ಯವಾದವಿತ್ತರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News