ತರಕಾರಿ, ಹಣ್ಣುಗಳ ಬೆಲೆ ಏರಿಕೆ : ಹಿಂದೆ ಎಷ್ಟಿತ್ತು.!? ಈಗ ಎಷ್ಟಾಗಿದೆ..!??

ಬೆಂಗಳೂರು : ಗ್ಯಾರಂಟಿಗಳ ಖುಷಿ ಬೆನ್ನಲ್ಲೇ ಜನಸಾಮಾನ್ಯನಿಗೆ ದರ ಏರಿಕೆ ಶಾಕ್ ಸಿಕ್ಕಿದೆ. ಒಂದೆಡೆ ವಿದ್ಯುತ್ ಶಾಕ್, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಶಾಕ್. ತರಕಾರಿ ಅಂಗಡಿಗೆ ಹೋದ್ರೂ ಶಾಕ್, ದಿನಸಿ ಅಂಗಡಿಗೆ ಹೋದ್ರೂ ಶಾಕ್ ಮೇಲೆ ಶಾಕ್. ನಿತ್ಯ ಸೇವಿಸುವ ಆಹಾರ ಸಾಮಾಗ್ರಿಗಳುವಸ್ತುಗಳ ದರ ಗಗನಕ್ಕೇರುತ್ತಿದೆ. ತರಕಾರಿ, ಹಣ್ಣುಗಳು ಜೇಬು ಸುಡುತ್ತಿವೆ.

ಮುಂಗಾರು ಕೈ ಕೊಟ್ಟ ಪರಿಣಾಮ ತರಕಾರಿ ಬೆಲೆ ಏರಿಕೆ ಮತ್ತೊಂದು ಕಾರಣವಾಗಿದ್ದು, ಇರುವ ಅಲ್ಪಸ್ವಲ್ಪ ತರಕಾರಿಗೆ ಭಾರೀ ಬೇಡಿಕೆ ಬಂದಿದೆ. ಇದರಿಂದಾಗಿ ತರಕಾರಿ ಪ್ರಿಯರು, ಹೋಟೆಲ್‌ ಮಾಲೀಕರು ಹಾಗೂ ಗ್ರಾಹಕರಿಗೆ ಬೆಲೆ ಬಿಸಿ ತಟ್ಟಿದ್ದು, ಜೇಬಿಗೆ ಕತ್ತರಿ ಬೀಳುತ್ತಿದೆ.


ತರಕಾರಿ ದರ ಎಷ್ಟು ಏರಿಕೆಯಾಗಿದೆ..??

ಟೊಮೊಟೋ 30 – 65 ರೂ.
ಬೀನ್ಸ್ 60 – 110 ರೂ.
ಕ್ಯಾರೆಟ್ 50 – 90 ರೂ.
ನವಿಲುಕೋಸು 35 – 70 ರೂ.
ಮೂಲಂಗಿ 25 – 49 ರೂ.
ನುಗ್ಗೆಕಾಯಿ 80 – 100 ರೂ.
ಬೀಟ್‍ರೂಟ್ 35 – 50 ರೂ.
ಹಸಿಮೆಣಸಿನಕಾಯಿ 95 – 115 ರೂ.
ಬೆಂಡೆಕಾಯಿ 30 – 54 ರೂ.
ಬೆಳ್ಳುಳ್ಳಿ 145 – 170 ರೂ.
ಶುಂಠಿ 120 – 200 ರೂ.
ಕರಿಬೇವು 50- 80 ರೂ.
ಕೊತ್ತಂಬರಿ 10 – 45 ರೂ. (ಕಟ್ಟು)


ಹಣ್ಣುಗಳು ಹಳೆಯ ದರ – ಹೊಸ ದರ
ಸೇಬು 180 – 288 ರೂ.
ಮೂಸಂಬಿ 70 – 114 ರೂ.
ದಾಳಿಂಬೆ 180 – 278 ರೂ.
ಅನಾನಸ್ 40 – 60 ರೂ.
ಸಪೋಟ 80 – 107 ರೂ.
ಏಲಕ್ಕಿ ಬಾಳೆಹಣ್ಣು 60 – 74 ರೂ.

Scroll to Top