ಪ್ರಧಾನಿ ನರೇಂದ್ರ ಮೋದಿ ಅವರು 6 ದಿನಗಳ ವಿದೇಶ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಅಮೆರಿಕ ಮತ್ತು ಈಜಿಪ್ಟ್ ಪ್ರವಾಸ ಮುಗಿಸಿ ಇಂದು ಬೆಳಗ್ಗೆ ಮೋದಿ ದೆಹಲಿಗೆ ಬಂದಿಳಿದಿದ್ದಾರೆ.
ಮೋದಿಯನ್ನು ಸ್ವಾಗತಿಸಲು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಮೀನಾಕ್ಷಿ ಲೇಖಿ ಆಗಮಿಸಿದ್ದರು. ಮೋದಿ ವಿಮಾನದಿಂದ ಇಳಿಯುತ್ತಿದ್ದಂತೆಯೇ, ನಡ್ಡಾ ಶಾಲು ಹೊದಿಸಿ, ಹೂವು ನೀಡಿ ಬರಮಾಡಿಕೊಂಡರು. ನಂತರ ಉಳಿದ ಗಣ್ಯರು ಮೋದಿಗೆ ಸ್ವಾಗತ ಕೋರಿದರು.
ಈ ವೇಳೆ ಮೋದಿಗೆ ನಡ್ಡಾಗೆ ‘ಇಲ್ಲಿ (ದೇಶ) ಏನ್ ನಡೆಯುತ್ತಿದೆ’ ಎಂದು ಕೇಳಿದ್ದಾರೆ. ‘ಪಕ್ಷದ ನಾಯಕರು ಒಂಬತ್ತು ವರ್ಷಗಳ ಅಭಿವೃದ್ಧಿ ಕಾರ್ಡ್ ಹಿಡಿದು ಜನರನ್ನು ತಲುಪಲು ಹೊರಟಿದ್ದಾರೆ. ದೇಶವು ಸಂತೋಷವಾಗಿದೆ ಅಂತಾ ನಡ್ಡಾ ಉತ್ತರಿಸಿದ್ದಾರೆ ಎಂದು ಬಿಜೆಪಿ ಎಂಪಿ ಮನೋಜ್ ತಿವಾರಿ ಮಾಧ್ಯಮಗಳಿಗೆ ಉತ್ತರಿಸಿದ್ದಾರೆ.
ಬಿಜೆಪಿ ಎಂಪಿ ಪರ್ವೇಶ್ ವರ್ಮಾ ಮಾಧ್ಯಮಗಳ ಜೊತೆ ಮಾತನಾಡಿ, ಮೋದಿ ದೇಶದಲ್ಲಿ ಏನ್ ನಡೀತಿದೆ ಮತ್ತು ಜನಪರ ಕೆಲಸಗಳನ್ನು ಪಕ್ಷವು ಜನರಿಗೆ ಹೇಗೆ ತಲುಪಿಸುತ್ತಿದೆ ಎಂದು ಕೇಳಿದರು. ಆ ಬಗ್ಗೆ ನಾವು ಅವರಿಗೆ ತಿಳಿಸಿದ್ದೇವೆ ಎಂದಿದ್ದಾರೆ.