ಕರಾವಳಿಯಲ್ಲಿ ಹಾವಿಗೂ ಆಪರೇಶನ್ ಮಾಡಿದ್ರು ನೋಡಿ.!!!

ಮಂಗಳೂರು: ಸುಣ್ಣದ ಡಬ್ಬ ನುಂಗಿದ ನಾಗರಹಾವಿನ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಡಬ್ಬವನ್ನು ಸರ್ಜರಿ ಮಾಡಿ ಹೊರತೆಗೆದ ಅಪರೂಪದ ಘಟನೆಯೊಂದು ನಡೆದಿದೆ.

ಜೂನ್ 6 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಾವಳ ಪಡೂರು ಬಳಿ ನಾಗರಹಾವನ್ನು ಸ್ನೇಕ್ ಕಿರಣ್ ರಕ್ಷಿಸಿದ್ದರು. ವಸಂತಿ ಎಂಬುವವರ ಮನೆಯ ಬಳಿಯ‌ ಬಿಲದಲ್ಲಿದ್ದ ನಾಗರಹಾವನ್ನು ರಕ್ಷಿಸುವಾಗ ನಾಗರಹಾವಿಗೆ ಏಟಾಗಿರುವುದು ಗಮನಕ್ಕೆ ಬಂದಿತ್ತು.

ಮಂಗಳೂರಿನ ಪಶುವೈದ್ಯ ಡಾ.ಯಶಸ್ವಿ ಅವರ ಬಳಿ ನಾಗರಹಾವನ್ನು ತಂದಾಗ ನಾಗರಹಾವಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ಡಬ್ಬ ಇರುವುದು ಪತ್ತೆಯಾಗಿತ್ತು. ನಂತರ ಜೀವನ್ಮರಣ ಸ್ಥಿತಿಯಲ್ಲಿದ್ದ ನಾಗರಹಾವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಗುಣಮುಖವಾದ ಬಳಿಕ ಸ್ನೇಕ್ ಕಿರಣ್ ಹಾವನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾರೆ.

Scroll to Top