ಮೂಡುಬಿದಿರೆ, ಜೂ 21: ಕ್ಷುಲ್ಲಕ ವಿಚಾರಕ್ಕೆ ಏಳು ಮಂದಿಯ ತಂಡವೊಂದು ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಜೂನ್ 21 ಬುಧವಾರದಂದು ಮೂಡಬಿದಿರೆ ಲಾಡಿ ಬಳಿಯ ಮಂಗಳೂರು ರೆಸ್ಟೋರೆಂಟ್ ಬಳಿ ಈ ಘಟನೆ ನಡೆದಿದೆ.
ಮೂಡಬಿದಿರೆ ನಿವಾಸಿ ಅಬೂಬಕ್ಕರ್ ( 57), ಅಝ್ಮಲ್ (23) ರವರಿಗೆ ಹಲ್ಲೆಗೊಳಗಾದವರು.
ಸಿನಾನ್, ಸಿರಾಜ್, ಹಸೈನಾರ್ ಮತ್ತು ನೌಶಾದ್ ಅವರನ್ನೊಳಗೊಂಡ ತಂಡವು ಬೈಕ್ ಪಾರ್ಕಿಂಗ್ ವಿಚಾರವಾಗಿ ಜಗಳವಾಡಿ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಅಜ್ಮಲ್ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆರಂಭದಲ್ಲಿ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಮೂಡುಬಿದಿರೆ ಠಾಣೆ ಪೊಲೀಸರು, ಪೊಲೀಸ್ ಆಯುಕ್ತರ ಒತ್ತಡದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.