ಚೆನ್ನೈ, ಜೂ.21: ಇಂದು ಜಗತ್ತಿನಾದ್ಯಂತ ಯೋಗ ದಿನದ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ಯೋಗದ ಮಾತೇಮಾತು. ಇಂದು ದೇವನಗರಿ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರೂ ಸಹ ದೂರದ ತಮಿಳುನಾಡಿನ ಪ್ರವಾಸದಲ್ಲಿದ್ದರೂ ನಾನಾ ಭಂಗಿಗಳಲ್ಲಿ ಯೋಗ ಮಾಡಿದರು.
ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಯೋಗಪಟು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯೋಗಾಸನ ಮಾಡಿದರು.
ಮಠದಲ್ಲಿ ದೇವರ ಗರ್ಭಗುಡಿಯ ಮುಂಭಾಗ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿವಿಧ ಯೋಗಾಸನದ ಭಂಗಿಗಳ ಪ್ರದರ್ಶನ ಮಾಡಿದರು.
ಈ ವೇಳೆ ಪೇಜಾವರ ಶ್ರೀ ಗಳೊಂದಿಗೆ ಮಠದ ಶಿಷ್ಯರಿಂದಲೂ ಯೋಗಾಸನ ನಡೆಯಿತು. ಅಂತರರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಪೇಜಾವರ ಶ್ರೀ ಯೋಗಾಸನದ ಮೂಲಕ ಯೋಗ ಜಾಗೃತಿ ಮೂಡಿಸಿದರು.
ಮಾನಸಿಕ ಮತ್ತು ಶಾರೀರಿಕ ಆರೋಗ್ಯವನ್ನು ಕಾಪಾಡಲು ಯೋಗ ಅತ್ಯವಶ್ಯಕ ಎಂದು ಸಾರಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ. ಎಲ್ಲರೂ ಸೂರ್ಯ ನಮಸ್ಕಾರ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಪೇಜಾವರ ಸ್ವಾಮೀಜಿ ಕರೆ ನೀಡಿದರು.