Tuesday, September 10, 2024
Homeಸುದ್ದಿಉಡುಪಿ: ಜೂ.22-25 ಹಲಸು ಮೇಳ

ಉಡುಪಿ: ಜೂ.22-25 ಹಲಸು ಮೇಳ

ಉಡುಪಿ, ಜೂ.19: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ ಹಾಗೂ ಇವರ ಸಂಯುಕ್ತ ಆಶ್ರಯದಲ್ಲಿ Robosoft Technologies Pvt. Ltd ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ರೈತ ಸೇವಾ ಕೇಂದ್ರದ ಆವರಣದಲ್ಲಿ ನಿರ್ಮಾಣವಾದ ಮೇಲ್ಮಾವಣಿ ಲೋಕಾರ್ಪಣೆ ಹಾಗೂ ಹಲಸು ಮೇಳ 2023 ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ದೊಡ್ಡಣಗುಡ್ಡೆ, ಉಡುಪಿ ಇಲಿನ ಪುಷ್ಪ ಹರಾಜು ಕೇಂದ್ರ(ರೈತ ಸೇವಾ ಕೇಂದ್ರ)ದ ಆವರಣದಲ್ಲಿ ಜೂನ್ 22 ರಿಂದ 25 ರವರೆಗೆ ಆಯೋಜಿಸಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಜೂನ್ 22 ರಂದು ಸಂಜೆ 4 ಘಂಟೆಗೆ ನಡೆಯಲಿದೆ.

ಈ ಮೇಳದಲ್ಲಿ ಹಲಸಿನ ವಿವಿಧ ತಳಿಗಳ ಹಣ್ಣು, ಗಿಡಗಳು ಹಾಗೂ ಹಲಸಿನ ಆಹಾರ ಉತ್ಪನ್ನಗಳು ಹಾಗೂ ಮೌಲ್ಯ ವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಜೇನು ಪ್ರದರ್ಶನ ಹಾಗೂ ಮಾರಾಟ ಮತ್ತು ಜಿಲ್ಲೆಯ ವಿವಿಧ ರೈತರು ಬೆಳೆಯುವ ಅಪ್ರದಾನ ಹಾಗೂ ಅಪರೂಪದ ಹಣ್ಣುಗಳು ಹಾಗೂ ಅಣಬೆಗಳನ್ನು ಮಾರಾಟ ಮಾಡಲು ರೈತರು, ರೈತ ಸಂಘಗಳು, ರೈತ ಉತ್ಪಾದಕರ ಸಂಸ್ಥೆಗಳ ಹಾಗೂ ಸಂಸ್ಕರಣಾ ಘಟಕಗಳಿಗೆ ಅವಕಾಶ ಕಲ್ಪಿಸಲಾಗುವುದು. ಸದರಿ ಮೇಳದಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕೆ ಆಸಕ್ತಿ ಹೊಂದಿರುವ ಮೇಲೆ ನಮೂದಿಸಿರುವ ಉತ್ಪನ್ನಗಳನ್ನು ಹೊಂದಿರುವ ರೈತರು, ರೈತ ಸಂಘಗಳು, ನರ್ಸರಿದಾರರು, ರೈತ ಉತ್ಪಾದಕರ ಸಂಸ್ಥೆಗಳ ಹಾಗೂ ಸಂಸ್ಕರಣಾ ಘಟಕಗಳ ಮಾಲಕರು ಜೂನ್ 20 ರ ಒಳಗಾಗಿ ತಮ್ಮ ಉತ್ಪನ್ನ ಹಾಗೂ ಲಭ್ಯತೆಯ ವಿವರದೊಂದಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾ.ವ.), ಪುಷ ಹರಾಜು ಕೇಂದ್ರ, ಉಡುಪಿ ರವರನ್ನು (9900910948) ಸಂಪರ್ಕಿಸಿ ಮೇಳದಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News