ತುಂಗಾ ನದಿಯಲ್ಲಿ ಈಜಲು ತೆರಳಿದ ಇಬ್ಬರು ಉಪನ್ಯಾಸಕರು ನೀರುಪಾಲು

ಶಿವಮೊಗ್ಗ, ಜೂ.18: ತೀರ್ಥಹಳ್ಳಿಯ ತುಂಗಾನದಿಯಲ್ಲಿ ಈಜಲು ತೆರಳಿದ್ದ ನಿಟ್ಟೆ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲಾದ ಘಟನೆ ಇಂದು ನಡೆದಿದೆ.ಕಾರ್ಕಳದ ಖಾಸಗಿ ಕಾಲೇಜಿನ ಉಪನ್ಯಾಸಕರಾದ ಪುನೀತ್ ನೆರಿಯ(38) ಹಾಗೂ ಬಾಲಾಜಿ (36)ಎಂಬವರು ನೀರು ಪಾಲಾಗಿದ್ದಾರೆ.

ತೀರ್ಥಹಳ್ಳಿ ಸಮೀಪದ ತೀರ್ಥ ಮತ್ತೂರು ಎಂಬಲ್ಲಿ ಹರಿಯುವ ತುಂಗಾ ನದಿಯಲ್ಲಿ ದುರ್ಘಟನೆ ನಡೆದಿದೆ.ಇವರಲ್ಲಿ ಪುನೀತ್ ಪೂಜಾರಿ ನೆರಿಯದ ಬೋವಿನಡಿಯ ನಿವಾಸಿಯಾಗಿದ್ದು, ನೆರಿಯ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ರಾಮ್ ಕುಮಾರ್ ರವರ ಪುತ್ರನಾಗಿದ್ದು, ನಿಟ್ಟೆಯಲ್ಲಿ ಉಪನ್ಯಾಸಕರಾಗಿದ್ದರು.

ಎಸ್ ಡಿ ಎಂ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿರುವ ಪುನೀತ್ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು.

ರಕ್ಷಣಾ ಕಾರ್ಯಾಚರಣೆ ವೇಳೆ ಬಾಲಾಜಿ ಮೃತದೇಹ ಮೊದಲು ಪತ್ತೆಯಾಗಿದ್ದು, ಪುನೀತ್ ಮೃತದೇಹ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

You cannot copy content from Baravanige News

Scroll to Top