Saturday, July 27, 2024
Homeಸುದ್ದಿ3ನೇ ದಿನ ಸರ್ಕಾರಿ ಬಸ್ ಗಳಲ್ಲಿ 51.52 ಲಕ್ಷ ಮಹಿಳೆಯರ ಉಚಿತ ಪ್ರಯಾಣ; ಇಲ್ಲಿದೆ ಟಿಕೆಟ್...

3ನೇ ದಿನ ಸರ್ಕಾರಿ ಬಸ್ ಗಳಲ್ಲಿ 51.52 ಲಕ್ಷ ಮಹಿಳೆಯರ ಉಚಿತ ಪ್ರಯಾಣ; ಇಲ್ಲಿದೆ ಟಿಕೆಟ್ ವೆಚ್ಚದ ಅಂಕಿ ಅಂಶ

ಬೆಂಗಳೂರು, ಜೂ.14: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಗೆ ಜೂನ್ 11 ರಂದು ರಾಜ್ಯಾದ್ಯಂತ ಚಾಲನೆ ದೊರೆತಿದ್ದು, ಇಂದಿಗೆ ನಾಲ್ಕನೇ ದಿನವಾಗಿದೆ. ಕಳೆದ ಮೂರು ದಿನಗಳಲ್ಲಿ ಸಾಕಷ್ಟು ಮಹಿಳೆಯರು ಬಸ್ನಲ್ಲಿ ಪ್ರಯಾಣಿಸಿದ್ದಾರೆ. ಮೂರು ದಿನಗಳಲ್ಲಿ ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. 3ನೇ ದಿನ ಅಂದರೆ ಜೂನ್ 13ರಂದು 51.52 ಲಕ್ಷ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ. ಇದರಿಂದಾಗಿ ಮಹಿಳೆಯರು ಪ್ರಯಾಣಿಸಿದ ಪ್ರಯಾಣದ ಒಟ್ಟು ಮೊತ್ತ 10,82,02,191 ರೂ. ಆಗಿದೆ. (ಹತ್ತು ಕೋಟಿ 82 ಲಕ್ಷದ 2 ಸಾವಿರದ ಒಂದನೂರ ತೊಂಭತ್ತೊಂದು ರೂಪಾಯಿ).

ಕೆಎಸ್​ಆರ್​ಟಿಸಿ ಬಸ್​​ನಲ್ಲಿ ನಿನ್ನೆ(ಜೂನ್ 13) 13,97,665 ಮಹಿಳೆಯರ ಪ್ರಯಾಣಿಸಿದ್ದರೆ (ಪ್ರಯಾಣದ ಮೊತ್ತ 4,12,26,780), ಬಿಎಂಟಿಸಿ ಬಸ್​ನಲ್ಲಿ 20,56,856 ಮಹಿಳೆಯರು ಸಂಚರಿಸಿದ್ದಾರೆ (ಪ್ರಯಾಣದ ಮೊತ್ತ 20,56,856). ಇನ್ನು ವಾಯವ್ಯ ಸಾರಿಗೆ ಬಸ್​ನಲ್ಲಿ 11,08,930 ಮಹಿಳೆಯರು ಓಡಾಡಿದರೆ ಅದರ ಮೊತ್ತ 11,08,930. ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 5,89,318 ಮಹಿಳೆಯರು ಪ್ರಯಾಣಿಸಿದ್ದಾರೆ (ಪ್ರಯಾಣದ ಮೊತ್ತ 5,89,318 ರೂ.).

2ನೇ ದಿನ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳೆಯರ ಉಚಿತ ಬಸ್‌ ಪ್ರಯಾಣದ ‘ಶಕ್ತಿ’ ಯೋಜನೆಗೆ ಎರಡನೇ ದಿನವೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು, 41.34 ಲಕ್ಷ ಮಹಿಳೆಯರು ಪ್ರಯಾಣಿಸಿದ್ದರು. ಇದರಿಂದಾಗಿ ಪ್ರಯಾಣದ ಮೊತ್ತವಾದ 8.83 ಕೋಟಿ ರೂ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ 11,40,057 ಮಹಿಳಾ ಪ್ರಯಾಣಿಕರು ಸಂಚರಿಸಿದ್ದು ಅದರ ಮೌಲ್ಯ 3,57,84,677 ರೂ.ಗಳಾಗಿವೆ. ಬಿಎಂಟಿಸಿ ಬಸ್‌ನಲ್ಲಿ 17,57,887 ಮಹಿಳೆಯರು ಪ್ರಯಾಣಿಸಿದ್ದು ಪ್ರಯಾಣದ ಮೌಲ್ಯ 1,75,33,234 ರೂ.ಗಳಾಗಿವೆ. ವಾಯವ್ಯ ಸಾರಿಗೆ ಬಸ್‌ಗಳಲ್ಲಿ 8,31,840 ಮಹಿಳೆಯರು ಪ್ರಯಾಣ ಮಾಡಿದ್ದು ಪ್ರಯಾಣದ ಮೌಲ್ಯ 2,10,66,638 ರೂ.ಗಳಾಗಿವೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್‌ಗಳಲ್ಲಿ 4,04,942 ಮಹಿಳೆಯರು ಪ್ರಯಾಣಿಸಿದ್ದು ಪ್ರಯಾಣದ ಮೌಲ್ಯ 1,39,68,885 ರೂ.ಗಳಾಗಿವೆ. ಒಟ್ಟು 41,34,726 ಮಹಿಳೆಯರು ಪ್ರಯಾಣಿಸಿದ್ದು ಪ್ರಯಾಣದ ಮೌಲ್ಯ 8,83,53,434 ರೂ.ಗಳೆಂದು ಕೆಎಸ್‌ಆರ್‌ಟಿಸಿ ತಿಳಿಸಿತ್ತು.

ಮೊದಲ ದಿನ ಪ್ರಯಾಣಿಸಿದ ಮಹಿಳೆಯರು ಎಷ್ಟು?
ಭಾನುವಾರ ಜೂನ್ 11ರಂದು ಈ ಶಕ್ತಿ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿತ್ತು. ಬಳಿಕ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 12 ವರೆಗೆ ರಾಜ್ಯಾದ್ಯಂತ ಬರೋಬ್ಬರಿ 5.71 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಬಸ್ ಗಳಲ್ಲಿ 1,93,831 ಮಹಿಳಾ ಪ್ರಯಾಣಿಕರು ಸಂಚಾರ ನಡೆಸಿದ್ದು ಇವರ ಪ್ರಯಾಣದ ಮೌಲ್ಯ 58,16,178 ರೂಪಾಯಿ. ಬಿಎಂಟಿಸಿ ಬಸ್​ನಲ್ಲಿ ಒಟ್ಟು 2,01,215 ಮಹಿಳೆಯರು ಪ್ರಯಾಣ ಮಾಡಿದ್ದರೆ(ಪ್ರಯಾಣಿಕರ ಮೌಲ್ಯ 26,19604.00), ವಾಯವ್ಯ ಸಾರಿಗೆ ಬಸ್​ನಲ್ಲಿ 1,22,354 ಮಹಿಳೆಯರು ಓಡಾಡಿದ್ದಾರೆ(ಪ್ರಯಾಣದ ಮೌಲ್ಯ ( 36,17,096.00). ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 53,623 ಮಹಿಳೆಯರು ಪ್ರಯಾಣ ಮಾಡಿದ್ದಾರೆ(ಪ್ರಯಾಣದ ಮೌಲ್ಯ-19.70.0000.00). ಹೀಗೆ ನಿನ್ನೆ ಸಾರಿಗೆ ಬಸ್​ಗಳಲ್ಲಿ ಒಟ್ಟು 5,71,023 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ಟಿಕೆಟ್​​ ವೆಚ್ಚ 1,40,22,878 ರೂ. ಆಗಿತ್ತು

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News