Saturday, July 27, 2024
Homeಸುದ್ದಿಕರಾವಳಿಮಂಗಳೂರಿನಲ್ಲಿ ಟಿಪ್ಪರ್-ಸ್ಕೂಟರ್ ನಡುವೆ ಡಿಕ್ಕಿ : ಇಚ್ಲಂಪಾಡಿಯ ಯುವಕ ಮೃತ್ಯು..!!

ಮಂಗಳೂರಿನಲ್ಲಿ ಟಿಪ್ಪರ್-ಸ್ಕೂಟರ್ ನಡುವೆ ಡಿಕ್ಕಿ : ಇಚ್ಲಂಪಾಡಿಯ ಯುವಕ ಮೃತ್ಯು..!!

ಮಂಗಳೂರು : ಪಂಪ್ವೆಲ್ ನಲ್ಲಿ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಇಚ್ಲಂಪಾಡಿಯ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಇಚ್ಲಂಪಾಡಿ ಇಲ್ಲುಂಗಲ್ ನಿವಾಸಿ ಆಂಟನಿ ಹಾಗೂ ವಾಮನ ದಂಪತಿ ಪುತ್ರ ಸಂದೇಶ್ (25) ಮೃತ ಯುವಕ.

ಸಂದೇಶ್ ಬೆಂದೂರ್ ವೆಲ್ ನಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ತನ್ನ ಸ್ಕೂಟಿಯಲ್ಲಿ ರೂಮ್ ಗೆ ತೆರಳುವ ವೇಳೆ ಪಂಪ್ವೆಲ್ ನಲ್ಲಿ ಈ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಸಂದೇಶ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಇಬ್ಬರು ಸಹೋದರರನ್ನು ಅಗಲಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News