ಬಂಟಕಲ್ಲು: ರಾ.ಸಾ ಯುವ ವೃಂದದವರ ರಕ್ತದಾನ ಪ್ರವಾಸ

ಶಿರ್ವ (ಜೂ.10) : ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ರಕ್ತದಾನ ಪ್ರವಾಸವು ಬಂಟಕಲ್ಲಿನಿಂದ ಮಣಿಪಾಲ ಕೆ . ಎಮ್.ಸಿ ರಕ್ತನಿಧಿ ವಿಭಾಗಕ್ಕೆ ಆಸ್ಪತ್ರೆಯ ಬಸ್ಸಿನಿಂದ ಹೋಗಿ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ 23 ಮಂದಿ ಸದಸ್ಯರು ರಕ್ತದಾನ ಮಾಡುವುದರ ಮೂಲಕ ನಡೆಯಿತು.



ಕೆ.ಎಮ್ ಸಿ ಆಸ್ಪತ್ರೆಯಲ್ಲಿನ ರಕ್ತದ ಕೊರತೆ ಬಗ್ಗೆ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಸತೀಶ್ ರವರ ಕೋರಿಕೆ ಮೇರೆಗೆ ರಕ್ತದಾನಿ ದೇವದಾಸ ಪಾಟ್ಕರ್ ರವರ ನೇತೃತ್ವದಲ್ಲಿ ಯುವ ವೃಂದದ ಗೌರವಾಧ್ಯಕ್ಷ ಕೆ ಆರ್ ಪಾಟ್ಕರ್ ರವರ ಸಂಘಟನೆಯೊಂದಿಗೆ ಈ ಪ್ರವಾಸ ನಡೆಯಿತು.

ಕೆ.ಎಮ್.ಸಿ ಆಸ್ಪತ್ರೆಯ ಅಧೀಕ್ಷಕ ಅವಿನಾಶ್ ಶೆಟ್ಟಿಯವರು ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದನೆಗಳನ್ನು ತಿಳಿಸಿದರು.

ರಕ್ತನಿಧಿ ವಿಭಾಗದ ಡಾ. ಶಮಿ ಶಾಸ್ರ್ರಿ ಯವರು ರಕ್ತ ಕೊರತೆಯ ಸಂಧರ್ಭದಲ್ಲಿ ಸಹಕರಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು. ಬಾಲಕೃಷ್ಣ ಮಡ್ಡೋಡಿ, ಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಆಸ್ಪತ್ರೆಯ ಬಸ್ಸಿನಲ್ಲಿ ರಕ್ತದಾನಿಗಳನ್ನು ಮತ್ತೇ ಬಂಟಕಲ್ಲಿಗೆ ಕರೆತರಲಾಯಿತು.

You cannot copy content from Baravanige News

Scroll to Top