Thursday, April 25, 2024
Homeಸುದ್ದಿಐದು ಗ್ಯಾರಂಟಿಗೆ ಹೊಸ ಗೈಡ್ ಲೈನ್ಸ್; ಯೋಜನೆ ಪಡೆಯಲು ನೀವೇನು ಮಾಡಬೇಕು..? ಯಾರಿಗೆಲ್ಲಾ ಫ್ರೀ..?

ಐದು ಗ್ಯಾರಂಟಿಗೆ ಹೊಸ ಗೈಡ್ ಲೈನ್ಸ್; ಯೋಜನೆ ಪಡೆಯಲು ನೀವೇನು ಮಾಡಬೇಕು..? ಯಾರಿಗೆಲ್ಲಾ ಫ್ರೀ..?

ಬೆಂಗಳೂರು, ಜೂ.07: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ಅಧಿಕಾರಕ್ಕೆ ಬಂದ ಕೂಡಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿ ಆದೇಶಿಸಿದೆ. ಐದು ಗ್ಯಾರಂಟಿಗಳ ಕುರಿತು ಸಂಬಂಧಪಟ್ಟ ಇಲಾಖೆಗಳು ಹೊಸ ಮಾರ್ಗಸೂಚಿಯನ್ನು ರಿಲೀಸ್ ಮಾಡಿವೆ. ಅನ್ನಭಾಗ್ಯ ಹೊರತುಪಡಿಸಿ ಇನ್ನುಳಿದ 4 ಗ್ಯಾರಂಟಿಗಳು ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ ಯೋಜನೆ, ಯುವನಿಧಿ ಕುರಿತಾದ ಮಾರ್ಗಸೂಚಿಗಳಲ್ಲಿ ತುಸು ಗೊಂದಲ ಇದೆ. ಹೀಗಾಗಿ ಈ ಸ್ಕೀಮ್ ಫಲಾನುಭವಿಗಳು ಆಗಲು ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ನ್ಯೂಸ್ಫಸ್ಟ್ ಕನ್ನಡ ನಿಮ್ಮ ಮುಂದಿಡಲಿದೆ..!

ಯಾರಿಗೆ ಫ್ರೀ ವಿದ್ಯುತ್, ಅದಕ್ಕೆ ಏನೆಲ್ಲಾ ಮಾಡಬೇಕು..?

ಬಾಡಿಗೆದಾರರಿಗೂ ಸಿಗಲಿದೆ ಗೃಹಜ್ಯೋತಿ ಉಚಿತ ವಿದ್ಯುತ್‌
ಗೃಹ ಜ್ಯೋತಿ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಸ್ಪಷ್ಟನೆ
ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು
ಬಾಡಿಗೆದಾರರು ಆರ್‌ಆರ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡಬೇಕು
ಬಾಡಿಗೆದಾರರು, ಲೀಸ್‌ದಾರರಿಗೂ ಕೂಡ ಗೃಹಜ್ಯೋತಿ ಲಾಭ
ಮನೆ ಬಾಡಿಗೆ ಕರಾರು ಪತ್ರವನ್ನ ಅಪ್‌ಲೋಡ್‌ ಮಾಡಬಹುದು
ವೋಟರ್‌ ಐಡಿ ಇದ್ದರೆ ಅದನ್ನೂ ಅಪ್‌ಲೋಡ್‌ ಮಾಡಬಹುದು
ಡ್ರೈವಿಂಗ್ ಲೈಸೆನ್ಸ್‌, ಪಾಸ್‌ಪೋರ್ಟ್‌, ರೇಷನ್‌ ಕಾರ್ಡ್‌ ನೀಡಬಹುದು
ಸರ್ಕಾರಿ ದಾಖಲೆಗಳಲ್ಲಿ ಅದೇ ಮನೆ ವಿಳಾಸ ಇದ್ರೆ ನೀಡಬಹುದು
ಮನೆ ಮಾಲೀಕ ತನ್ನ ಮನೆಗಳ ಬಗ್ಗೆ ಘೋಷಣೆ ಮಾಡಬೇಕಿಲ್ಲ
ಕರಾರು ಪತ್ರ ರಿಜಿಸ್ಟರ್‌ ಆಗಿರಬೇಕೆಂಬುದು ಕಡ್ಡಾಯವೂ ಇಲ್ಲ
ಜೂನ್‌ 15ರಿಂದ ಜುಲೈ 5ರವರೆಗೆ ಅರ್ಜಿ ಸಲ್ಲಿಕೆ ಮಾಡಬಹುದು
12 ತಿಂಗಳ ಸರಾಸರಿಯಂತೆ ಉಚಿತ ವಿದ್ಯುತ್‌ ಯೂನಿಟ್‌ ನಿಗದಿ
ಶೇ.10ರಷ್ಟು ಹೆಚ್ಚುವರಿ ಬಳಕೆಗೂ ಇರಲಿದೆ ಉಚಿತ ಯೋಜನೆ
ಸರಾಸರಿಗಿಂತ ಶೇ.10 ಮೀರಿದ್ರೆ ಹೆಚ್ಚುವರಿ ಯೂನಿಟ್‌ಗಷ್ಟೇ ಬಿಲ್‌
200 ಯೂನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್‌ ಪ್ರಯೋಜನ
200 ಯೂನಿಟ್‌ಗಿಂತ ಹೆಚ್ಚಾದ್ರೆ ಸಂಪೂರ್ಣ ಬಿಲ್‌ ಪಾವತಿಸಬೇಕು

ಗೃಹಲಕ್ಷ್ಮಿ ಯೋಜನೆ ಯಾರಿಗೆ..? ಅದರ ಪ್ರಕ್ರಿಯೆ ಏನು..?

ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಕಡ್ಡಾಯ
ಕಾರ್ಡ್​ನಲ್ಲಿ ನಮೂದಾಗಿರುವ ಯಜಮಾನಿಗೆ ಮಾತ್ರ ಸೌಲಭ್ಯ
ಒಂದು ಕುಟುಂಬದಲ್ಲಿ ಒಂದು ಮಹಿಳೆಗೆ ಮಾತ್ರ ಯೋಜನೆ ಲಾಭ
ಜೂನ್ 15 ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ
ಸೇವಾ ಸಿಂಧು ಪೋರ್ಟಲ್​ ಮೂಲಕ ಅರ್ಜಿ ಸಲ್ಲಿಸಲು ಸೂಚನೆ
ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಸರ್ಕಾರದಿಂದ ಅವಕಾಶ
ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ ಮಾಡಲು ಸೂಚನೆ
ಮಹಿಳೆ ಅಥವಾ ಆಕೆ ಪತಿ ತೆರಿಗೆ ಪಾವತಿದಾರರು ಆಗಿರಬಾರದು
ಆದಾಯ ತೆರಿಗೆ ಪಾವತಿಸುವ ಕುಟುಂಬಕ್ಕಿಲ್ಲ 2,000 ರೂಪಾಯಿ
ಜಿಎಸ್​​ಟಿ ರಿಟರ್ನ್ ಸಲ್ಲಿಸುವ ಕುಟುಂಬಕ್ಕೂ ಯೋಜನೆ ಸಿಗಲ್ಲ
ಸೌಲಭ್ಯ ಪಡೆಯಲು ತಪ್ಪು ಮಾಹಿತಿ ನೀಡಿದರೆ ಕಠಿಣ ಕ್ರಮ
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
ಮಹಿಳೆಯರ ‘ಶಕ್ತಿ’ ಗೊಂದಲಕ್ಕೆ ತೆರೆ ಎಳೆದ ಸರ್ಕಾರ
ವಿದ್ಯಾರ್ಥಿನಿಯರೂ ಸೇರಿ ಎಲ್ಲಾ ಮಹಿಳೆಯರಿಗೂ ‘ಶಕ್ತಿ’
ರಾಜ್ಯದೊಳಗಿನ ಪ್ರಯಾಣವಷ್ಟೇ ಮಹಿಳೆಯರಿಗೆ ಫ್ರೀ
ವಿವರವಾಗಿ ಮಾರ್ಗಸೂಚಿ ಹೊರಡಿಸಿರುವ ಸರ್ಕಾರ
‘ಶಕ್ತಿ’ಗೆ ಗೈಡ್​ಲೈನ್ಸ್ ಹೀಗಿದೆ..!

ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಸರ್ಕಾರದಿಂದ ‘ಶಕ್ತಿ’ ಯೋಜನೆಯ ಮಾರ್ಗಸೂಚಿ ಬಿಡುಗಡೆ
ವಿದ್ಯಾರ್ಥಿನಿಯರೂ ಸೇರಿ ಎಲ್ಲಾ ಮಹಿಳೆಯರಿಗೂ ‘ಶಕ್ತಿ’
ಲಿಂಗತ್ವ ಅಲ್ಪ ಸಂಖ್ಯಾತರಿಗೂ ಬಸ್ಗಳಲ್ಲಿ ಉಚಿತ ಪ್ರಯಾಣ
ನಗರ, ಸಾಮಾನ್ಯ, ವೇಗದೂತ ಸಾರಿಗೆಗಳಲ್ಲಿ ಅವಕಾಶ
ಎಸಿ ಬಸ್, ಲಕ್ಷುರಿ ಬಸ್ಗಳಲ್ಲಿ ಉಚಿತ ಪ್ರಯಾಣ ಇರಲ್ಲ
ಜೂನ್ 11ರಿಂದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ
ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಇದು ಅನ್ವಯಿಸುತ್ತದೆ
ಮಹಿಳೆಯರ ಹೊರ ರಾಜ್ಯ ಪ್ರಯಾಣಕ್ಕೆ ಉಚಿತ ಇರುವುದಿಲ್ಲ
ರಾಜಹಂಸ, ನಾನ್ ಎಸಿ ಸ್ಲೀಪರ್, ವಜ್ರ, ವಾಯುವಜ್ರ, ಐರಾವತ
ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ
ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ಲೈ ಬಸ್ಗಳು
ಇ.ವಿ. ಪವರ್ ಪ್ಲಸ್ಗೆ (ಎಸಿ ಬಸ್ಗಳು) ಇದು ಅನ್ವಯಿಸುವುದಿಲ್ಲ
ಬಿಎಂಟಿಸಿ ಹೊರತು ಎಲ್ಲಾ ಸಾರಿಗೆಯಲ್ಲಿ ಪುರುಷರಿಗೆ ಆಸನ ಮೀಸಲು
ಶೇಕಡ 50ರಷ್ಟು ಆಸನಗಳನ್ನ ಪುರುಷರಿಗೆ ಮೀಸಲಿಡಬೇಕು
ಈ ಯೋಜನೆಯಡಿ ತಗಲುವ ವೆಚ್ಚವನ್ನ ಸರ್ಕಾರವೇ ಭರಿಸುತ್ತದೆ
ಎಲ್ಲಾ ಮಹಿಳೆಯರಿಗೂ ‘ಶಕ್ತಿ’ ಸ್ಮಾರ್ಟ್ ಕಾರ್ಡ್ ವಿತರಣೆ ಆಗುತ್ತದೆ
ಅರ್ಜಿ ಪಡೆದು ಮುಂದಿನ 3 ತಿಂಗಳಲ್ಲಿ ಕಾರ್ಡ್ ವಿತರಣೆ ಮಾಡಬೇಕು
ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೂ ಸರ್ಕಾರಿ ಗುರುತಿನ ಚೀಟಿ ಬಳಕೆ
ಶೂನ್ಯ ಟಿಕೆಟ್ ವಿತರಿಸುವ ಮುನ್ನ ಗುರುತಿನ ಚೀಟಿ ಪರಿಶೀಲಿಸಬೇಕು
ಯಾಱರಿಗೆ ಯುವನಿಧಿ

ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ಯುವನಿಧಿ

ಪದವೀಧರರಿಗೆ ತಿಂಗಳಿಗೆ ₹3,000, ಡಿಪ್ಲೊಮಾದಾರರಿಗೆ ₹1,500
24 ತಿಂಗಳ ಅವಧಿಗೆ ಯುವನಿಧಿ ಗ್ಯಾರೆಂಟಿಯಡಿ ಭತ್ಯೆ ನೀಡಿಕೆ
ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು
ಪದವಿ, ಡಿಪ್ಲೊಮಾವನ್ನ 2023ರ ವರ್ಷದಲ್ಲಿ ಪೂರೈಸಿರಬೇಕು
ಶಿಕ್ಷಣ ಪೂರೈಸಿ 6 ತಿಂಗಳ ವರೆಗೆ ಉದ್ಯೋಗ ಸಿಗದಿದ್ದರೆ ಭತ್ಯೆ
ಕನ್ನಡಿಗರು ಮಾತ್ರ ಯುವನಿಧಿ ಗ್ಯಾರೆಂಟಿ ಯೋಜನೆಗೆ ಅರ್ಹರು
ಪದವಿ ಪೂರ್ಣಗೊಂಡ 6 ತಿಂಗಳ ಬಳಿಕ ಅರ್ಜಿ ಸಲ್ಲಿಸಬಹುದು
2 ವರ್ಷದೊಳಗೆ ಉದ್ಯೋಗ ಸಿಕ್ಕಲ್ಲಿ ಭತ್ಯೆ ಪಾವತಿ ಸ್ಥಗಿತವಾಗುತ್ತೆ
ಉದ್ಯೋಗದ ಬಗ್ಗೆ ತಪ್ಪು ಮಾಹಿತಿ ನೀಡಿದ್ರೆ, ಮಾಹಿತಿ ನೀಡದಿದ್ರೆ ದಂಡ
ಪದವಿ, ಡಿಪ್ಲೊಮಾ ಬಳಿಕ ಉನ್ನತ ವ್ಯಾಸಂಗ ಮಾಡ್ತಿದ್ರೆ ಭತ್ಯೆ ಇರಲ್ಲ
ಅಪ್ರೆಂಟಿಸ್ ವೇತನ ಪಡೆಯುತ್ತಿದ್ದರೂ ಯುವ ನಿಧಿ ಭತ್ಯೆ ಇರುವುದಿಲ್ಲ
ಸರ್ಕಾರಿ, ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರಿಗೆ ಭತ್ಯೆ ಇಲ್ಲ
ಸ್ವಯಂ ಉದ್ಯೋಗ ಯೋಜನೆಯಡಿ ಸಾಲ ಪಡೆದಿದ್ದರೆ ಭತ್ಯೆ ಸಿಗಲ್ಲ


ಅನ್ನಭಾಗ್ಯ ಯೋಜನೆ ಯಾರಿಗೆ..?

ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿದವರಿಗೆ ಸ್ಕೀಮ್ ಅನ್ವಯ
ಅಂತ್ಯೋದಯ ಚೀಟಿ ಹೊಂದಿರೋ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯ
ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಆಹಾರ ಧಾನ್ಯ ಲಭ್ಯ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News