ಉಡುಪಿ: ದೈವಸ್ಥಾನದ ಕಾಣಿಕೆ ಡಬ್ಬಿಗಳ ಕಳವು ಪ್ರಕರಣ; ಆರೋಪಿಗೆ ಶಿಕ್ಷೆ ಪ್ರಕಟ

ಉಡುಪಿ, ಜೂ 07: ದೈವಸ್ಥಾನದ ಕಾಣಿಕೆ ಡಬ್ಬಗಳನ್ನು ಕಳವು ಮಾಡಿದ ಆರೋಪಿಗೆ ನಗರದಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಮ್. ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

2022 ಅಕ್ಟೋಬರ್ 30 ರಂದು ಬೆಳಗ್ಗೆ ಪ್ರಕಾಶ್‌ಎಂಬಾತನು ಬಡಗುಬೆಟ್ಟುಗ್ರಾಮದ ಬೈಲೂರು ಶ್ರೀ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಗಳನ್ನು ಕಳವು ಮಾಡಿರುವ ಹಿನ್ನೆಲೆ, ಉಡುಪಿ ನಗರಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆ,ನ ಗರದ ಪ್ರಧಾನ ಸಿ.ಜೆ ಮತ್ತು ಸಿ.ಜೆ.ಎಮ್. ನ್ಯಾಯಾಲಯದ ನ್ಯಾಯಾಧೀಶ ವಿಘ್ನೇಶ್‌ ಕುಮಾರ್‌ ಅವರು ಆರೋಪಿ ಪ್ರಕಾಶ್‌ಗೆ ಭಾ.ದಂ.ಸಂ.ಕಲಂ: 380 ಮತ್ತು 457ರ ಅಡಿ 1 ವರ್ಷ 6 ತಿಂಗಳು ಕಠಿಣ ಸಜೆ ಮತ್ತು ರೂ.2000ದಂಡ ವಿಧಿಸಿದ್ದು, ದಂಡ ಪಾವತಿಸಲುತಪ್ಪಿದಲ್ಲಿ1 ತಿಂಗಳ ಸಾಧಾರಣಾ ಶಿಕ್ಷೆ ವಿಧಿಸಿ, ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕಿ ಜಯಂತಿ.ಕೆ ವಾದ ಮಂಡಿಸಿದ್ದಾರೆ.

Scroll to Top