ಕಡಂಬು ಪ್ರೀಮಿಯರ್ ಲೀಗ್ ಇವರ ವತಿಯಿಂದ ಕೆಪಿಎಲ್ (KPL)ಟ್ರೊಪಿ-2023 ಕಡಂಬು ಮೈದಾನದಲ್ಲಿ ಜೂ.4 ಭಾನುವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಶಿರ್ವ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ರತನ್ ಶೆಟ್ಟಿ, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದಂತಹ ಮೇಲ್ವಿನ್ ಡಿಸೋಜ ಮತ್ತು ಯುವ ಮುಖಂಡರದ ಸಂದೀಪ್ ಪೂಜಾರಿ ಮಟ್ಟಾರು ದೀಪ ಬೆಳಗಿಸುವುದರ ಮೂಲಕವಾಗಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು ಕಾರ್ಯಕ್ರಮದಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದ್ದು ಎಲ್ಲಾ ತಂಡಗಳಿಗೂ ಜೆರ್ಸಿ ನೀಡಲಾಯಿತು ಮತ್ತು ಆರು ತಂಡದ ಮಾಲೀಕರಾದ ಸದಾನಂದ ಆಚಾರ್ಯ, ಚೇತನ್ ಆಚಾರ್ಯ, ಪ್ರವೀಣ್ ಆಚಾರ್ಯ,ಸಂತೋಷ ಆಚಾರ್ಯ ಕಾಪಿಕಾಡ್ ವಿಶು ಆಚಾರ್ಯ ಸೂಡ,ಸಂತೋಷ ಆಚಾರ್ಯ ಸಾಗು ಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಜುನಾಥ ಆಚಾರ್ಯ ಮೂಡುಮಟ್ಟಾರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಥಮ ತಂಡವಾಗಿ ಕಡಂಬು -X1 ಗೆದ್ದುಕೊಂಡರೆ ದ್ವಿತೀಯ ಸ್ಥಾನ ದುರ್ಗಾ ಫ್ರೆಂಡ್ಸ್ ಕಡಂಬು ಗೆದ್ದುಕೊಂಡಿತು.
ರಕ್ಷಿತ್ ಪೂಜಾರಿ ಸಂತೋಷ ಆಚಾರ್ಯ ಕಾಪಿಕಾಡ್ ಮತ್ತು ಸಂತೋಷ ಆಚಾರ್ಯ ಸಾಗುಮನೆ ಕ್ರೀಡಾ ಕೂಟವನ್ನು ಆಯೋಜಿಸಿದರು