ಮದ್ಯಪ್ರಿಯರಿಗೆ ಶಾಕ್; ರಾಜ್ಯ ಸರ್ಕಾರದಿಂದ ಮದ್ಯದ ದರ ಹೆಚ್ಚಳ

ಬೆಂಗಳೂರು, ಜೂ.07: ತಾನು ಘೋಷಿಸಿರುವ ಗ್ಯಾರಂಟಿಗಳ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸದ ಮೇಲಾಗುವ ಹಣದ ಹೊರೆಯನ್ನು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಅದಕ್ಕಾಗಿ ಸಂಪನ್ಮೂನ ಕ್ರೋಢೀಕರಣಕ್ಕೆ ಸರ್ಕಾರ ಹೆಜ್ಜೆಯಿಟ್ಟಿದೆ. ಆ ಹಿನ್ನೆಲೆಯಲ್ಲಿ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ.

ಅಂದರೆ, ಬಿಯರ್ ದರಗಳಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಲಿದೆ. ಬಡ್ ವೈಸರ್ ಬಿಯರ್ ನ ದರ 198 ರೂ.ಗಳಿಂದ 220 ರೂ.ಗಳಿಗೆ, ಯು ಬಿ ಬಿಯರ್ ದರ 130 ರೂ.ಗಳಿಂದ 135 ರೂ.ಗಳಿಗೆ, ಕಿಂಗ್ ಫಿಶರ್ ಬಿಯರ್ ದರ 160 ರೂ.ಗಳಿಂದ 170 ರೂ.ಳಿಗೆ ಏರಿಕೆಯಾಗಲಿದೆ.

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ರಾಜ್ಯದ ಮದ್ಯ ಮಾರಾಟಗಾರರಿಂದ 35 ಸಾವಿರ ಕೋಟಿ ರೂ. ಸಂಗ್ರಹ ಮಾಡುವ ಗುರಿಯನ್ನು ಹೊಂದಿತ್ತು. ಆದರೆ, ಸಂಗ್ರಹವಾಗಿದ್ದು 29 ಸಾವಿರ ಕೋಟಿ ರೂ. ಮಾತ್ರ. ಗ, ಬಿಜೆಪಿ ಸರ್ಕಾರ ಯಾವುದೇ ಗ್ಯಾರಂಟಿಗಳನ್ನು ಘೋಷಣೆ ಮಾಡಿರಲಿಲ್ಲ. ಆದರೆ, ಈಗ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಘೋಷಿಸಿರುವುದರಿಂದ ಮದ್ಯದ ಬೆಲೆಯನ್ನು ಅನಿವಾರ್ಯವಾಗಿ ಹೆಚ್ಚಿಸಿ ರಾಜ್ಯದ ಬೊಕ್ಕಸಕ್ಕೆ ಹಣ ತುಂಬಿಸುವ ಕೆಲಸ ಮಾಡಿದೆ.

2023-24ನೇ ವರ್ಷದಲ್ಲಿ ಅಂದಾಜು 35 ಸಾವಿರ ಕೋಟಿ ರೂ.ಮೌಲ್ಯದ ಮದ್ಯ ಮಾರಾಟ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಆ ಮೂಲಕ, 65 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.ಈ ಮೂಲಕ ಐದು ಗ್ಯಾರಂಟಿಗಳ ಜಾರಿಗಾಗಿ ಬೇಕಾಗುವ ಸಂಪನ್ಮೂಲವನ್ನು ಸಂಗ್ರಹಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ

Scroll to Top