Wednesday, April 24, 2024
Homeಸುದ್ದಿರಾಜ್ಯಬೆಂಗಳೂರಿನಿಂದ ನಾಪತ್ತೆಯಾದ ಬಾಲಕನನ್ನು ಹುಡುಕುತ್ತಾ ಮಲ್ಪೆಗೆ ಬಂದ ಹೆತ್ತವರು

ಬೆಂಗಳೂರಿನಿಂದ ನಾಪತ್ತೆಯಾದ ಬಾಲಕನನ್ನು ಹುಡುಕುತ್ತಾ ಮಲ್ಪೆಗೆ ಬಂದ ಹೆತ್ತವರು

ಮಲ್ಪೆ : ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾರದ ಹಿಂದೆ ನಾಪತ್ತೆಯಾಗಿದ್ದ ಯಲಹಂಕ ನ್ಯೂ ಟೌನ್ ನ್ಯಾಶನಲ್ ಪಬ್ಲಿಕ್ ನ 9ನೇ ತರಗತಿ ಓದುತ್ತಿದ್ದ ಆದಿತ್ಯಾ ಎಂಬ ಬಾಲಕ ಹುಡುಕುತ್ತಾ ಆತನ ಮನೆಯವ್ರು ಕರಾವಳಿಯ ಮಲ್ಪೆಗೆ ಬಂದಿದ್ದಾರೆ.


ತನ್ನ ತಾಯಿಯ ಮೊಬೈಲ್ನಲ್ಲಿ ಕೆಲವು ಪ್ರವಾಸಿ ತಾಣಗಳ ಬಗ್ಗೆ ಸರ್ಚ್ ಮಾಡಿ ಮಾಹಿತಿ ಸಂಗ್ರಹಿಸಿ ಬ್ಯಾಗ್ನಲ್ಲಿ ಬಟ್ಟೆ ತುಂಬಿಕೊಂಡು ಮನೆ ಬಿಟ್ಟಿದ್ದು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಿತ್ಯಾ ಅಮ್ಮನ ಫೋನ್ನಲ್ಲಿ ಮಂಗಳೂರು, ಮಲ್ಪೆ, ಮೈಸೂರಿನ ಕೆಲ ಭಾಗಗಳ ಬಗ್ಗೆ ಸರ್ಚ್ ಮಾಡಿ ಊರು ಬಿಟ್ಟಿದ್ದಾನೆ. ಮೇ 29ರಂದು ಕಟ್ಟಿಂಗ್ ಶಾಪ್ಗೆಂದು ಮನೆಯಿಂದ ತೆರಳಿದ್ದ ಆದಿತ್ಯಾ ಬಟ್ಟೆ ಸಮೇತ ಮನೆ ಬಿಟ್ಟಿದ್ದಾನೆ. ಇದರಿಂದ ಗಾಬರಿಗೊಳಗಾದ ಪೋಷಕರು ಕರಾವಳಿ ಭಾಗದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕ ಮನೆ ಬಿಟ್ಟು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಆರ್.ಟಿ.ನಗರ ಸೇರಿ ಮಲ್ಪೆ ಭಾಗದ ಠಾಣೆಗೆ ಪೊಲೀಸರಿಂದ ಮಾಹಿತಿ ನೀಡಲಾಗಿದೆ.

ಒಟ್ಟಾರೆ ನಾಪತ್ತೆಯಾದ ಮಗನಿಗಾಗಿ ಹಗಲು ರಾತ್ರಿ ಎನ್ನದೆ ಪೊಲೀಸರ ಜೊತೆ ಪೋಷಕರು ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News