ಮಣಿಪಾಲ, ಜೂ 05: ಉಡುಪಿ ತಾಲ್ಲೂಕಿನ ಪೆರಂಫಳ್ಳಿ ಎಂಬಲ್ಲಿ ಇರುವ ಕೇಂದ್ರ ಸರಕಾರದ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಇದರ ಕಾಂಪೌಂಡ್ ಗೋಡೆಯನ್ನು ಒಡೆದು ಹಾಕಿರುವ ಘಟನೆ ಶನಿವಾರದಂದು ಸಂಭವಿಸಿದೆ.
ಶನಿವಾರ ರಾತ್ರಿ ಸುಮಾರು 50 ರಿಂದ 70 ಮಂದಿ ಅಪರಿಚಿತರು ಜೆಸಿಬಿ ವಾಹನದೊಂದಿಗೆ ಆಗಮಿಸಿ ಇಲ್ಲಿನ ಪೆರಂಪಳ್ಳಿಯಲ್ಳಿರುವ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಂಸ್ಥೆಗೆ ಸೇರಿದ ಜಾಗದಲ್ಲಿದ್ದ ಸುಮಾರು 20 ಅಡಿ ಯ ಕಾಂಪೌಂಡ್ ಗೋಡೆಯನ್ನು ಕೆಢವಿ ಹಾಕಲಾಗಿದೆ. ಘಟನೆಯಿಂದಾಗಿ ಸಂಸ್ಥೆ ಗೆ ಸುಮಾರು 3.2ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ.
ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.