Monday, April 22, 2024
Homeಸುದ್ದಿಕರಾವಳಿಕಾರ್ಕಳ : ಮೀನು ಸಾಗಾಟದ ಲಾರಿ ಮರಕ್ಕೆ ಡಿಕ್ಕಿ ; ಇಬ್ಬರಿಗೆ ಗಾಯ

ಕಾರ್ಕಳ : ಮೀನು ಸಾಗಾಟದ ಲಾರಿ ಮರಕ್ಕೆ ಡಿಕ್ಕಿ ; ಇಬ್ಬರಿಗೆ ಗಾಯ

ಕಾರ್ಕಳ : ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ನಲ್ಲೂರು ಪರಪ್ಪಾಡಿಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಮಲ್ಪೆ ಕಡೆಯಿಂದ ಬೆಂಗಳೂರಿಗೆ ಮೀನು ಸಾಗಿಸುತ್ತಿದ್ದ ಲಾರಿ ಪಾಜೆಗುಡ್ಡೆ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಬಿದ್ದ ರಭಸಕ್ಕೆ ಲಾರಿಯಲ್ಲಿದ್ದ ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದೆ.

ಈ ವಾಹನದಲ್ಲಿ ಚಾಲಕ ಸೇರಿದಂತೆ ಮೂವರಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮೂವರಲ್ಲಿ ಓರ್ವನನ್ನು ಶೃಂಗೇರಿ ಮೂಲದ ನಯಾಜ್ ಅಹಮದ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಗ್ರಾಮ ಪಂಚಾಯತ್ ನ ಸದಸ್ಯ ಸುಮಿತ್‌ ನಲ್ಲೂರು ಸೇರಿದಂತೆ ಸ್ಥಳೀಯರು ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News