Wednesday, May 22, 2024
Homeಸುದ್ದಿವಿಶ್ವಕರ್ಮ ಸಮಾಜ ಸೇವಾ ಸಂಘ ಕಡಂಬು ಮಟ್ಟಾರು ಇದರ 'ದಶಮಾನೋತ್ಸವ ಮತ್ತು ವಿಶ್ವಕರ್ಮ ಪೂಜೆ'

ವಿಶ್ವಕರ್ಮ ಸಮಾಜ ಸೇವಾ ಸಂಘ ಕಡಂಬು ಮಟ್ಟಾರು ಇದರ ‘ದಶಮಾನೋತ್ಸವ ಮತ್ತು ವಿಶ್ವಕರ್ಮ ಪೂಜೆ’

ವಿಶ್ವಕರ್ಮ ಸಮಾಜ ಸೇವಾ ಸಂಘ ಕಡಂಬು ಮಟ್ಟಾರು ಇದರ ದಶಮಾನೋತ್ಸವ ಮತ್ತು ವಿಶ್ವಕರ್ಮ ಪೂಜೆ ದಿನಾಂಕ 28-5-2023, ಆದಿತ್ಯವಾರ ಸಂಜೆ 4 ಗಂಟೆಗೆ ಕಡಂಬು ಮೈದಾನದಲ್ಲಿ ನಡೆಯಿತು.

ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ದೀಪ ಬೆಳಗಿಸುವುದರ ಮೂಲಕ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ ಕೊಟ್ಟರು.

ಸುಮಾರು 5 ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ. ಸ್ಥಳೀಯ ಪ್ರತಿಭೆಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಸಂಶ ತಂಡ ಕಾಪು ಇವರಿಂದ ಬಲೆ ತೆಲಿಪಲೆ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷರು ಚೇತನ್ ಆಚಾರ್ಯ ಸಭೆಯ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಪ್ರಮುಖರಾದ ಜಯಪ್ರಕಾಶ್ ಪ್ರಭು, ಮಾಜಿ ಶಾಸಕರು ಲಾಲಾಜಿ ಮೆಂಡನ್, ಸಂಘದ ಗೌರವ ಅಧ್ಯಕ್ಷರು ಗೋಪಾಲ ಆಚಾರ್ಯ ಮತ್ತು ಕಾಳಿಕಾಂಬಾ ಮಹಿಳಾ ಸಂಘದ ಅಧ್ಯಕ್ಷರಾದ ಚೈತ್ರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಜುನಾಥ್ ಆಚಾರ್ಯ ಮೂಡು ಮಟ್ಟಾರು ಪ್ರಾಸ್ತಾವಿಕ ನುಡಿಗಳನ್ನು, ಸಂಘದ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಸ್ವಾಗತಿಸಿದರು. ಸಂಘದ ಕೋಶಾಧಿಕಾರಿ ದೀಪಕ್ ಆಚಾರ್ಯ ಧನ್ಯವಾದಗಳನ್ನು ನೀಡಿದರು. ದಾಮೋದರ್ ಶರ್ಮಾ ಕಾರ್ಯಕ್ರಮನ್ನು ನಿರೂಪಿಸಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News