ಉಡುಪಿ, ಜೂ 01: ಮಲ್ಪೆ ಠಾಣಾ ವ್ಯಾಪ್ತಿಯ ಕೊಡವೂರು ಬಳಿ ಕಾನೂನು ಬಾಹಿರವಾಗಿ ಜೂಜಾಟವಾಡುತ್ತಿದ್ದಾಗ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿ 18 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಮಲ್ಪೆ ಠಾಣಾ ವ್ಯಾಪ್ತಿಯ ಕೊಡವೂರು ಎಂಬಲ್ಲಿ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು ದಾಳಿ ನಡೆಸಿ ಜೂಜಾಟವಾಡುತ್ತಿದ್ದ 18 ಜನರನ್ನು ವಶಕ್ಕೆ ಪಡೆದು 1,72,080 ನಗದು 18 ಮೊಬೈಲ್ ಹಾಗೂ 6 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.