Saturday, July 27, 2024
Homeಸುದ್ದಿಕರಾವಳಿದಕ್ಷಿಣ ಕನ್ನಡ : ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗೊಂಡ ಪವರ್ ಮ್ಯಾನ್ ಮೃತ್ಯು..!!!

ದಕ್ಷಿಣ ಕನ್ನಡ : ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗೊಂಡ ಪವರ್ ಮ್ಯಾನ್ ಮೃತ್ಯು..!!!

ದಕ್ಷಿಣ ಕನ್ನಡ : ವಿದ್ಯುತ್ ಕಂಬದಲ್ಲಿ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗೊಂಡು ಲೈನ್ ಮ್ಯಾನ್ ಮೃತಪಟ್ಟ ಘಟನೆ ಜೂ.1ರ ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ.

ಕಡಬ ಮೆಸ್ಕಾಂ ಲೈನ್ ಮ್ಯಾನ್, ಬಾಗಲಕೋಟೆ ಮೂಲದ ದ್ಯಾಮಣ್ಣ ದೊಡ್ಮನಿ ಮೃತಪಟ್ಟವರು.

ಕಡಬದ ಮುಳಿಮಜಲು ಸಮೀಪದ ಕಾಯರಡ್ಕ ಎಂಬಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಕಂಡು ಕಂಬವೇರಿದ್ದ ಲೈನ್ ಮ್ಯಾನ್ ಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News