Monday, April 22, 2024
Homeಸುದ್ದಿಕರಾವಳಿಕಾರ್ಕಳ: ಮನೆಗೆ ನುಗ್ಗಿ 5 ಲಕ್ಷ ಮೌಲ್ಯದ ನಗ - ನಗದು ಕಳವು..!!!

ಕಾರ್ಕಳ: ಮನೆಗೆ ನುಗ್ಗಿ 5 ಲಕ್ಷ ಮೌಲ್ಯದ ನಗ – ನಗದು ಕಳವು..!!!

ಕಾರ್ಕಳ : ನಂದಳಿಕೆ ಮೂಡುಮನೆಯಲ್ಲಿ ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಕಳವು ಕೃತ್ಯ ನಡೆದಿದೆ.


ಈ ಬಗ್ಗೆ ಎನ್ ಸುಧಾಕರ ರಾವ್ (66) ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.ಮೇ 26 ರ ಮಧ್ಯಾಹ್ನ 3ರಿಂದ ಮೇ 30 ರ ಸಂಜೆ 6 ಗಂಟೆಯ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿರುವುದಾಗಿ ಶಂಕಿಸಲಾಗಿದೆ

ಸುಧಾಕರ ರಾವ್ ವಾಸವಿರುವ ಮನೆಯ ಪಕ್ಕದಲ್ಲಿರುವ ಇವರ ಮೂಲಮನೆ ಮೂಡುಮನೆಯ ಕಪಾಟಿನಲ್ಲಿ ಇಟ್ಟಿದ್ದ ಸುಮಾರು 40 ಗ್ರಾಂ ತೂಕದ ಕರಿಮಣಿ ಸರ-2. 26 ಗ್ರಾಂನ ನಕ್ಲೇಸ್ -1. 40 ಗ್ರಾಂ ನ ಮುತ್ತಿನ ಸರ -1. 30 ಗ್ರಾಂನ ಕಿವಿ ಓಲೆ-3, 15 ಗ್ರಾಂನ ಉಂಗುರ -2, 24 ಗ್ರಾಂ ನ ಲಕ್ಷ್ಮಿ ಪದಕ ಇರುವ ಚೈನು -1, 10 ಗ್ರಾಂ ನ ಮಕ್ಕಳ ಚೈನು -1, 10 ಗ್ರಾಂ ನ ಬಳೆ-1, ಆಧಾರ್ ಕಾರ್ಡ್.ಪಾನ್ ಕಾರ್ಡ್ ಹಾಗೂ ಸುಮಾರು 3000 ನಗದು, ಅಂದಾಜು 24 ಪವನ್ ತೂಕದ ಸುಮಾರು 5 ಲಕ್ಷಮೌಲ್ಯದ ಒಡವೆಗಳನ್ನು ಯಾರೋ ಕಳ್ಳರು ಕಳುವು ಗೈದಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News