GSLV-F12 ನ್ಯಾವಿಗೇಷನ್ ಉಪಗ್ರಹ ಉಡಾವಣೆ ಮಾಡಿದ ಇಸ್ರೋ

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಶ್ರೀಹರಿಕೋಟಾದಿಂದ ತನ್ನ ಸುಧಾರಿತ ನ್ಯಾವಿಗೇಷನ್ ಉಪಗ್ರಹ ಜಿಎಸ್‌‌ಎಲ್‌‌ವಿ – ಎಫ್‌12 (GSLV-F12) ಮತ್ತು ಎನ್‌‌ವಿಎಸ್‌‌ -01 (NVS-01) ಅನ್ನು ಇಂದು ಉಡಾವಣೆ ಮಾಡಿದೆ.


ನ್ಯಾವಿಗೇಷನ್ ಸೇವೆಗಳನ್ನು ಸುಧಾರಿಸಲು ಮತ್ತು ವ್ಯವಸ್ಥೆಗೆ ಹೊಸ ವಿಚಾರಗಳನ್ನು ಪರಿಚಯಿಸಲು ಈ ಉಡಾವಣೆ ಮಾಡಲಾಗಿದೆ.

ಇನ್ನು 51.7 ಮೀಟರ್ ಎತ್ತರದ ಜಿಯೋಸಿಂಕ್ರೊನಸ್ ಉಪಗ್ರಹ ಉಡಾವಣಾ ವಾಹನವು ತನ್ನ 15ನೇ ಹಾರಾಟದಲ್ಲಿ 2,232 ಕೆಜಿ ತೂಕದ ನ್ಯಾವಿಗೇಷನ್ ಉಪಗ್ರಹ ನ್‌‌ವಿಎಸ್‌‌ -01 ಅನ್ನು ಇಂದು ಬೆಳಿಗ್ಗೆ 10.42ಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 130 ಕಿ.ಮೀ. ದೂರದ ಎರಡನೇ ಉಡಾವಣಾ ಕೇಂದ್ರದಿಂದ ನಡೆಸಲಾಗಿದೆ.

ಸುಮಾರು 20 ನಿಮಿಷಗಳ ನಂತರ ಹಾರಾಟ ನಡೆಸಿದೆ ಎಂದು ಇಸ್ರೋ ಹೇಳಿದೆ.

You cannot copy content from Baravanige News

Scroll to Top