Sunday, May 26, 2024
Homeಸುದ್ದಿಉಚ್ಚಿಲ: ಬಡಾ ಗ್ರಾಮ ಪಂಚಾಯತ್ ನ ತ್ಯಾಜ್ಯ ಘಟಕಕ್ಕೆ ಬೆಂಕಿ 8 ಲಕ್ಷ ರೂ. ಗೂ...

ಉಚ್ಚಿಲ: ಬಡಾ ಗ್ರಾಮ ಪಂಚಾಯತ್ ನ ತ್ಯಾಜ್ಯ ಘಟಕಕ್ಕೆ ಬೆಂಕಿ 8 ಲಕ್ಷ ರೂ. ಗೂ ಅಧಿಕ ನಷ್ಟ

ಉಚ್ಚಿಲ, ಮೇ 26: ಇಲ್ಲಿನ ಬಡಾ ಗ್ರಾಮ ಪಂಚಾಯತಿಯ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಗುರುವಾರ ಮಧ್ಯಾಹ್ನ4 ಗಂಟೆಯ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ.

ಪ್ಯಾಡ್ ಬರ್ನರ್ ಮತ್ತು ಪ್ಲಾಸ್ಟಿಕ್ ಮೋಲ್ಡಿಂಡಿಗ್ ಯಂತ್ರಗಳ ಮೌಲ್ಯ ಸುಮಾರು ೪ ಲಕ್ಷದ ೬೦ ಸಾವಿರ ಎಂದು ಪಿಡಿಓ ಸತೀಶ್ ಹೇಳಿದ್ದಾರೆ.

ಅಂತೆಯೇ ಕಟ್ಟಡ ಇನ್ನಿತರ ಪರಿಕರಗಳು ಸೇರಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಬೆಂಕಿಗೆ ಆಹುತಿಯಾಗಿದೆ ಎಂದು ಪಿಡಿಓ ಸತೀಷ್‌ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿಯನ್ನು ನಂದಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News