ಉಡುಪಿಯಲ್ಲಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಫ್ಲೆಕ್ಸ್ಗೆ ಹಾನಿ

ಉಡುಪಿ : ಕರ್ನಾಟಕದ ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ರವರಿಗೆ ಅಭಿಮಾನಿಗಳು ಶುಭಾಶಯ ಕೋರಿ ಮಲ್ಪೆ ಪಡುಕರೆ ಸೇತುವೆ ಬಳಿಯಲ್ಲಿ ಹಾಕಿದ್ದ ಫ್ಲೆಕ್ಸನ್ನು ಕಿಡಿಗೇಡಿಗಳು ಹರಿದಿರುವ ಘಟನೆ ನಡೆದಿದೆ.

ಪಡುಕರೆಗೆ ಶಾಲೆ, ರಸ್ತೆ, ನಲ್ಲಿ ನೀರು, ವಿದ್ಯುತ್, ಸಮುದ್ರಕ್ಕೆ ತಡೆಗೋಡೆ, ಮಲ್ಪೆ ಬಂದರು, ಸಬ್ಸಿಡಿ, ಸೇತುವೆ, ಜನರ ಹೊಟ್ಟೆ ತುಂಬಿಸಲು ಪಡಿತರ ಕೇಂದ್ರ ಇಂತಹ ಹಲವಾರು ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದು ಕಾಂಗ್ರೆಸ್ ಸರಕಾರವೇ ಹೊರತು ಮತ್ಯಾವುದೇ ಪಕ್ಷವಲ್ಲ.

ಫ್ಲೆಕ್ಸ್ ಹರಿಯುವ, ಮತ್ತೊಬ್ಬನನ್ನು ತುಳಿಯುವ, ವ್ಯಕ್ತಿ – ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಸರ್ವಾಧಿಕಾರದ ಈ ಭಯೋತ್ಪಾದನೆ ನಿಲ್ಲಬೇಕಾದ ಅನಿವಾರ್ಯತೆ ಇದೆ. ಎಂದು ಕರ್ನಾಟಕದ ನೂತನ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯ ಪಡುಕರೆಯ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

You cannot copy content from Baravanige News

Scroll to Top