Wednesday, April 24, 2024
Homeಸುದ್ದಿಮನೆಯ ವಾಶ್‌ ರೂಮ್‌ ನಲ್ಲಿ ಬಾಲಿವುಡ್‌ ನಟನ ಶವ ಪತ್ತೆ

ಮನೆಯ ವಾಶ್‌ ರೂಮ್‌ ನಲ್ಲಿ ಬಾಲಿವುಡ್‌ ನಟನ ಶವ ಪತ್ತೆ

ನಟ,ಮಾಡೆಲ್‌ ಆಗಿ ಬಾಲಿವುಡ್‌ ನಲ್ಲಿ ಗುರುತಿಸಿಕೊಂಡಿದ್ದ ಆದಿತ್ಯ ಸಿಂಗ್ ರಜಪೂತ್ ತಮ್ಮ ಮನೆಯ ವಾಶ್‌ ರೂಮ್‌ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ ಮಧ್ಯಾಹ್ನ (ಮೇ.22 ರಂದು) ಜನಪ್ರಿಯ ನಟ, ಮಾಡೆಲ್ ಮತ್ತು ಕಾಸ್ಟಿಂಗ್ ಸಂಯೋಜಕರಾಗಿದ್ದ ಆದಿತ್ಯ ಸಿಂಗ್ ರಜಪೂತ್ ಅಂಧೇರಿಯಲ್ಲಿರುವ ತಮ್ಮ ನಿವಾಸದ ವಾಶ್‌ ರೂಮ್‌ ಶವವಾಗಿ ಪತ್ತೆಯಾಗಿದ್ದಾರೆ.

ನಟನ ಸ್ನೇಹಿತ ಹಾಗೂ‌ ಕಟ್ಟಡದ ಸೆಕ್ಯೂರಿಟಿ ಗಾರ್ಡ್‌ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಅಧಿಕ ಪ್ರಮಾಣದಲ್ಲಿ ಡ್ರಗ್‌ ಸೇವಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಕಳೆದ ರಾತ್ರಿ ಸ್ನೇಹಿತರೊಂದಿಗೆ ಇರುವ ಬಗ್ಗೆ ನಟ ಇನ್ಸ್ಟಾಗ್ರಾಮ್‌ ನಲ್ಲಿ ಸ್ಟೋರಿಯನ್ನು ಹಾಕಿದ್ದರು.

ಆದಿತ್ಯ ಸಿಂಗ್ ರಜಪೂತ್ ಮಾಡೆಲ್, ನಟನಾಗಿ ಗುರುತಿಸಿಕೊಂಡಿದ್ದರು. ನಟರೊಂದಿಗೆ ಅನೇಕ ಬ್ರ್ಯಾಂಡ್‌ಗಳಿಗೆ ಕೆಲಸ ಮಾಡಿದ್ದರು.

ʼಕ್ರಾಂತಿವೀರ್ ʼ, ‘ಮೈನೆ ಗಾಂಧಿ ಕೋ ನಹಿಂ ಮಾರಾ’ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅವರು, 300 ಕ್ಕೂ ಹೆಚ್ಚಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಜನಪ್ರಿಯ ಶೋ ʼ Splitsvilla-9ʼ ರಲ್ಲಿ ಭಾಗವಹಿಸಿದ್ದರು. ʼಲವ್ʼ, ʼಆಶಿಕಿʼ, ʼಕೋಡ್ ರೆಡ್ʼ, ʼಆವಾಜ್ ಸೀಸನ್ 9ʼ, ʼಬ್ಯಾಡ್ ಬಾಯ್ ಸೀಸನ್ 4ʼ ಮತ್ತು ಇತರ ಟಿವಿ ಶೋಗಳಲ್ಲಿ ಭಾಗಿಯಾಗಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News