ಪ್ರಧಾನಿ ಮೋದಿಗೆ ಫಿಜಿ ದೇಶದ ಅತ್ಯುನ್ನತ ಗೌರವ

ಪೋರ್ಟ್ ಮೊರೆಸ್ಬಿ : ಜಾಗತಿಕ ನಾಯಕತ್ವವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫಿಜಿಯ ಅತ್ಯುನ್ನತ ಗೌರವ “ದಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ” ಪ್ರಶಸ್ತಿಯನ್ನು ನೀಡಿ ಫಿಜಿ ದೇಶದ ಪ್ರಧಾನ ಮಂತ್ರಿ ನೀಡಿ ಗೌರವಿಸಿದ್ದಾರೆ.

ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ನಾನ್-ಫಿಜಿಯನ್ನರು ಮಾತ್ರ ಈ ಗೌರವವನ್ನು ಪಡೆದಿದ್ದಾರೆ. ಈ ಗೌರವ ಕೇವಲ ತನಗಲ್ಲ, 140 ಕೋಟಿ ಭಾರತೀಯರಿಗೆ, ಶತಮಾನಗಳಷ್ಟು ಹಳೆಯದಾದ ಭಾರತ-ಫಿಜಿ ಸಂಬಂಧಗಳ ಗೌರವ ಎಂದು ಪ್ರಧಾನಿ ಮೋದಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಜಾಗತಿಕ ನಾಯಕತ್ವವನ್ನು ಗುರುತಿಸಿ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ ಎಂಬ ಗೌರವವನ್ನು ಬೆರಳೆಣಿಕೆಯಷ್ಟು ಫಿಜಿಯೇತರರು ಮಾತ್ರ ಪಡೆದಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.

You cannot copy content from Baravanige News

Scroll to Top