ಬೀಡಿ ಉದ್ಯಮದ ಮೇಲೆ ತೆರಿಗೆ ಹೆಚ್ಚಳಕ್ಕೆ ಶಿಫಾರಸು

ನವದೆಹಲಿ, ಮೇ 21: ಬೀಡಿ ಉದ್ಯಮದ ಮೇಲೆ ತಂಬಾಕು ಉತ್ಪನ್ನಗಳ ಮಾದರಿಯಲ್ಲೇ ತೆರಿಗೆ ಹೆಚ್ಚಳ ಮಾಡಿ, ನಿಯಂತ್ರಣ ಕ್ರಮಗಳನ್ನು ಬಲಪಡಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಜೋಧ್‌ಪುರದ ಏಮ್ಸ್‌ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ ಮತ್ತು ಇಂಟರ್‌ನ್ಯಾಷನಲ್‌ ಯೂನಿಯನ್‌ ಅಗೈನ್ಸ್‌ ಟ್ಯುಬರ್‌ಕ್ಯುಲೋಸಿಸ್‌ ಆ್ಯಂಡ್‌ ಲಂಗ್‌ ಡಿಸೀಸ್‌ ಜಂಟಿಯಾಗಿ ನಡೆಸಿ ಸಲ್ಲಿಸಿದ ಅಧ್ಯಯನ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದೆ.

ಇನ್ನು ಬೀಡಿ ಉದ್ಯಮಕ್ಕೆ ನೀಡಿರುವ ‘ಗುಡಿ ಕೈಗಾರಿಕೆ’ ಸ್ಥಾನಮಾನವನ್ನು ರದ್ದು ಮಾಡಬೇಕು. ತೆರಿಗೆ ಹೆಚ್ಚಳ ಮಾಡಬೇಕು. ಆಗ ಬೀಡಿ ದರ ಸಹಜವಾಗಿಯೇ ಏರಿಕೆ ಕಾಣುತ್ತದೆ. ಇದರಿಂದ ಅದರ ಬೇಡಿಕೆಯೂ ತಗ್ಗುತ್ತದೆ. ಜತೆಗೆ ಬೀಡಿ ಉತ್ಪನ್ನಗಳ ಮೇಲಿನ ನಿಯಂತ್ರಣವನ್ನು ಹೆಚ್ಚಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

You cannot copy content from Baravanige News

Scroll to Top