Tuesday, April 16, 2024
Homeಸುದ್ದಿಖ್ಯಾತ ನೇತ್ರ ತಜ್ಞ, ನಾರಾಯಣ ನೇತ್ರಾಲಯದ ಅಧ್ಯಕ್ಷ ಭುಜಂಗ ಶೆಟ್ಟಿ ನಿಧನ

ಖ್ಯಾತ ನೇತ್ರ ತಜ್ಞ, ನಾರಾಯಣ ನೇತ್ರಾಲಯದ ಅಧ್ಯಕ್ಷ ಭುಜಂಗ ಶೆಟ್ಟಿ ನಿಧನ

ಬೆಂಗಳೂರು, ಮೇ 20: ದೇಶದ ಖ್ಯಾತ ನೇತ್ರ ತಜ್ಞ, ನಾರಾಯಣ ನೇತ್ರಾಲಯದ ಅಧ್ಯಕ್ಷ ಭುಜಂಗ ಶೆಟ್ಟಿ (69) ನಿನ್ನೆ ರಾತ್ರಿ ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಎಂದಿನಂತೆ ಕರ್ತವ್ಯಕ್ಕೆ‌ ಹಾಜರಾಗಿ ರೋಗಿಗಳ ತಪಾಸಣೆ ಮಾಡಿದ ಡಾ. ಭುಜಂಗ ಶೆಟ್ಟಿ, ಸಂಜೆ ಮನೆಗೆ ಹೋಗಿ ಮನೆಯಲ್ಲಿ ಜಿಮ್​ನಲ್ಲಿ ವ್ಯಾಯಾಮ ಮಾಡಿದ್ದರು. ಆಗ ಅವರು ಹೃದಯಾಘಾತಕ್ಕೆ ಒಳಗಾಗಿ, ಕುಸಿದು ಬಿದ್ದಿದ್ದರು. ತಕ್ಷಣ ಯಶವಂತಪುರದ ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಆಸ್ಪತ್ರೆಗೆ ಕರೆತರುವ ವೇಳೆ ಹೃದಯ ಬಡಿತ ನಿಂತು ಹೋಗಿದ್ದು, ಆಸ್ಪತ್ರೆಯಲ್ಲಿ ಸಿಪಿಆರ್​​ ಮಾಡಿದ್ದರೂ ಪ್ರಯೋಜನವಾಗಲಿಲ್ಲ

ಭುಜಂಗ ಶೆಟ್ಟಿ ಅವರು 1978 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದ್ದರು. 1982 ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನ ಮಿಂಟೋ ಆಪ್ತಾಲ್ಮಿಕ್ ಆಸ್ಪತ್ರೆಯಲ್ಲಿ ನೇತ್ರಶಾಸ್ತ್ರದಲ್ಲಿ ರೆಸಿಡೆನ್ಸಿ ತರಬೇತಿ ಪಡೆದಿದ್ದರು. 80ರ ದಶಕದಲ್ಲಿ ಸಣ್ಣ ಕ್ಲಿನಿಕ್‌ನಲ್ಲಿ ನೇತ್ರ ಚಿಕಿಯ್ಸಾಲಯವನ್ನು ಪ್ರಾರಂಭಿಸಿದ ಡಾ. ಭುಜಂಗ ಶೆಟ್ಟಿ ನಾರಾಯಣ ನೇತ್ರಾಯಲದ ಅಧ್ಯಕ್ಷರಾಗಿದ್ದರು.

ಭುಜಂಗ ಶೆಟ್ಟಿ ನಾರಾಯಣ ನೇತ್ರಾಲಯದಲ್ಲಿ ವಿವಿಧ ಉಪವಿಭಾಗಗಳ ಅಭಿವೃದ್ಧಿಯನ್ನು ಸಕ್ರಿಯವಾಗಿ ಪ್ರೋತ್ಸಾಹಿಸಿದ್ದಾರೆ ಮತ್ತು ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯತೆ ಹೊಂದಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News