ಉಡುಪಿ: ಆನ್ಲೈನ್ ಕೆಲಸದ ಆಮಿಷ; ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ ವಂಚನೆ..!!

ಉಡುಪಿ ಮೇ 16: ಟೆಲಿಗ್ರಾಮ್ ಮೂಲಕ ಟಾಸ್ಕ್ ನೀಡಿ ಹಣ ಗಳಿಸುವ ಆನ್ಲೈನ್ ಕೆಲಸದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 2.78 ಲ.ರೂ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳತ್ತೂರು ಮುರುಳಿಧರ್ ರಾವ್ ಇವರು ಮೇ 12 ರಂದು ಟೆಲಿಗ್ರಾಮ್ ಆಪ್ ನಲ್ಲಿ ಟಾಸ್ಕ್ ನಡೆಸಿ ಹೆಚ್ಚಿನ ಲಾಭ ಪಡೆಯುವ ಬಗ್ಗೆ ಬಂದಿರುವ ಸಂದೇಶವನ್ನು ಗಮನಿಸಿ, ಅದರಲ್ಲಿ ಸೂಚಿಸಿದ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ಈ ವೇಳೆ ಆ ವ್ಯಕ್ತಿ ಟಾಸ್ಕ್ ನಡೆಸಲು ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳನ್ನು ನೀಡಿದ್ದು, ಇದನ್ನು ನಂಬಿದ ಮುರಳೀಧರ್ ರಾವ್ ಅವರು ಮೇ 12 ರಿಂದ ಮೇ 14 ರ ನಡುವೆ ಹಂತ ಹಂತವಾಗಿ ಒಟ್ಟು 2,78,000 ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ NEFT ಮತ್ತು UPI ಟ್ರಾನ್ಸೆಕ್ಷನ್ ಮುಖೇನ ವರ್ಗಾವಣೆ ಮಾಡಿದ್ದರು. ಆದರೆ ಆರೋಪಿಗಳು ಟಾಸ್ಕ್ ನೀಡದೆ ಇವರು ನೀಡಿದ ಹಣವನ್ನು ವಾಪಾಸು ನೀಡದೆ ವಂಚಿಸಿದ್ದಾರೆ ಎಂಬುದಾಗಿ ಮುರಳಿಧರ್ ರಾವ್ ಅವರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top