ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಭರ್ಜರಿ ಜಯಭೇರಿ

ಉಡುಪಿ ಮೇ 13: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಅವರು 96122 ಮತಗಳನ್ನು ಪಡೆದು ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ಬಾರೀ ಕುತೂಹಲ ಕೆರಳಿಸಿದ್ದ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತದಾನದ ಅಂತಿಮ ಸುತ್ತಿನ ಮತ ಎಣಿಕೆ ಅಂತ್ಯದ ವೇಳೆ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಅವರು 96122 ಮತಗಳನ್ನು ಪಡೆದು 32,318 ಮತಗಳ ಅಂತರದಲ್ಲಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

ಮತ ಎಣಿಕೆಯ ಅಂತ್ಯದ ವೇಳೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಅವರು 63804 ಮತಗಳನ್ನು, ಜೆಡಿಎಸ್‌ನ ದಕ್ಷತ್ ಶೆಟ್ಟಿ 835 ಮತಗಳನ್ನು ಪಡೆದುಕೊಂಡಿದ್ದರು. ಈ ಬಾರಿ ಉಡುಪಿಯಲ್ಲಿ 1298 ಮತಗಳು ನೋಟಾಗೊಂಡಿದೆ.

You cannot copy content from Baravanige News

Scroll to Top