Monday, May 20, 2024
Homeಸುದ್ದಿಉಡುಪಿ: 3 ಕ್ಷೇತ್ರದಲ್ಲಿ ಗೆಲುವಿನತ್ತ ಬಿಜೆಪಿ

ಉಡುಪಿ: 3 ಕ್ಷೇತ್ರದಲ್ಲಿ ಗೆಲುವಿನತ್ತ ಬಿಜೆಪಿ

ಉಡುಪಿ ಮೇ 13: ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ದಾಪುಗಾಲು ಇಡುತ್ತಿದೆ. ಉಡುಪಿ ಜಿಲ್ಲೆಯ ಮೂರು ಪ್ರಮುಖ ಕ್ಷೇತ್ರಗಳಾದ ಕಾಪು, ಉಡುಪಿ, ಕುಂದಾಪುರದಲ್ಲಿ ಬಿಜೆಪಿ ಬಹುಮತ ಪಡೆದು ಗೆಲುವಿನತ್ತ ಮುನ್ನುಗುತ್ತಿದ್ದು, ಕಾರ್ಕಳ ಹಾಗೂ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಮತಗಳ ರೇಸ್‌ನಲ್ಲಿ ಟಫ್ ಕಾಂಪಿಟೀಷನ್ ಇದ್ದು ಬಹುತೇಕ ಬಿಜೆಪಿ ಗೆಲುವಿಗೆ ಹತ್ತಿರದಲ್ಲಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಅವರು 17,645 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಭಾರೀ ಹಿನ್ನಡೆಯಾಗಿದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲೂ ಗುರ್ಮೆ ಸುರೇಶ್ ಶೆಟ್ಟಿ ಅವರು 6503 ಮತಗಳ ಅಂತರದಲ್ಲಿ ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಡಿ ಅವರು 5711 ಮತಗಳ ಅಂತರದಲ್ಲಿ ಗೆಲುವಿನತ್ತ ಸಾಗಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಅವರು 2344 ಮತಗಳ ಅಂತರದಿಂದ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News