ಕಿರುತೆರೆಯ ಲೋಕ ಈಗ ನಾವೆಲ್ಲಾ ಅಂದುಕೊಂಡಷ್ಟು ಚಿಕ್ಕದಾಗಿಲ್ಲ. ಬಾನೆತ್ತರಕ್ಕೆ ಬೆಳೆಯುತ್ತಿರುವ ಲೋಕ ಸ್ಮಾಲ್ ಸ್ಕ್ರೀನ್ ಲೋಕ. ಹೊಸತನದ ಹುರುಪಿನ ಕತೆಗಳ ಜೊತೆ ಹಳೆಯ ಕತೆಗಳಿಗೆ ಗುಡ್ಬೈ ಹೇಳ್ತಿದೆ ಕಿರುತೆರೆಯ ಲೋಕ. ಮೇಲೆ ಮೇಲೆ ಹೊಸ ಹೊಸ ಕತೆಗಳು ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ ಪಡೆದುಕೊಳ್ತಿದೆ.
ಹೊಸ ಕತೆಗಳ ಆಗಮನಕ್ಕಾಗಿ ಹಳೆ ಕತೆಗಳು ಗುಡ್ಬೈ ಹೇಳಲು ಸಜ್ಜಾಗ್ತಿವೆ. ಸದ್ಯ ಶುರುವಿನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ತನ್ನದೆ ಆದ ಹೊಸ ‘ದಾಖಲೆಯನ್ನ ಸೃಷ್ಟಿ ಮಾಡಿದ್ದು, ಆರೂರು ಜಗದೀಶ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ. ಧಾರಾವಾಹಿಯ ಕತೆಗೆ ಇಡೀ ಕರುನಾಡೇ ಮನಸೋತಿತ್ತು. ರಾಜನಂದಿನಿಯ ಸಿಕ್ರೇಟ್ ತಿಳಿದುಕೊಳ್ಳಲು ಇಡೀ ಕರುನಾಡೆ ಆ ಒಂದು ಕಾಲದಲ್ಲಿ ವೈಟ್ ಮಾಡಿತ್ತು. ಪ್ರತಿ ಎಪಿಸೋಡ್ಸ್ಗಳನ್ನು ಕೂಡ ತಪ್ಪದೆ ವೀಕ್ಷಿಸುತ್ತಿದ್ದರು ವೀಕ್ಷಕರು.
ಕ್ರಮೇಣ ಕತೆ ಆಯ ತಪ್ಪಿ ಬೇರೆ ಬೇರೆ ವಿಷಯಗಳಿಂದ ಕತೆ ಈಗ ಮುಕ್ತಾಯ ಹಂತ ತಲುಪಿದೆ. ಬರೋಬ್ಬರಿ ನಾಲ್ಕೈದು ವರ್ಷಗಳಿಂದ ನಮ್ಮನೆಲ್ಲಾ ಮನರಂಜಿಸಿದ್ದಂತ ಧಾರಾವಾಹಿ ಇನ್ನೇನು ಕೆಲವೇ ದಿನಗಳಷ್ಟೆ ಪ್ರಸಾರವಾಗಲಿದೆ.
ಈಗಾಗಲೇ ಕತೆಯ ಅಂತಿಮ ಶೂಟಿಂಗ್ನಲ್ಲಿ ಎಲ್ಲಾ ಕಲಾವಿದ್ರು ಬ್ಯೂಸಿ ಆಗಿದ್ದಾರೆ. ಇನ್ನೂ ಈ ಧಾರಾವಾಹಿಯ ಟೈಮಿಂಗ್ ತುಂಬಾನೆ ಒಳ್ಳೆ ಸ್ಲಾಟ್ ಹೊಂದಿದೆ. ಈ ಧಾರಾವಾಹಿಯನ್ನ ಬಹುಶ: ಸೀತಾ ರಾಮ ಧಾರಾವಾಹಿ ಅಥವಾ ಅಮೃತಾ ಧಾರೆ ಧಾರಾವಾಹಿ ರಿಪ್ಲೇಸ್ ಮಾಡೋ ಚಾನ್ಸಸ್ ಇದೆ.
ಒಟ್ಟಿನಲ್ಲಿ ಹಳೆ ಕತೆಗಳು ತನ್ನ ಅಭಿಮಾನಿಗಳಿಗೆ ಗುಡ್ಬೈ ಹೇಳಲಿದೆ. ಹೊಸ ಕತೆಗಳಿಗೆ ಕಾತುರರಾಗಿದ್ದಾರೆ ಕರುನಾಡ ವೀಕ್ಷಕರು