ಬಿಜೆಪಿ 125ಕ್ಕಿಂತಲೂ ಅಧಿಕ ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ; ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಮೇ.12: ಬಿಜೆಪಿ 125ಕ್ಕಿಂತಲೂ ಅಧಿಕ ಸ್ಥಾನಗಳಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು…

ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಗಳು ಏನೇ ಹೇಳಲಿ, ಬಿಜೆಪಿ ನಿಶ್ಚಳವಾಗಿ ಬಹುಮತ ಲಭಿಸಲಿದೆ. ರಾಜ್ಯದ 58 ಸಾವಿರ ಬೂತಗಳ ಪೈಕಿ 31 ಸಾವಿರ ಬೂತ್ ಗಳಲ್ಲಿ ಹೆಚ್ಚಿನ ಮತ ಪಡೆದಿದ್ದೇವೆ. 2018ರ ಚುನಾವಣೆಯಲ್ಲಿ 24 ಸಾವಿರ ಮತಗಟ್ಟೆಗಳಲ್ಲಿ ಹೆಚ್ಚಿನ ಮತ ಪಡೆದಿದ್ದೇವು. ಆಗ ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈಗ 31 ಸಾವಿರ ಬೂತ್ ಗಳಲ್ಲಿ

ಹೆಚ್ಚು ಮತ ಪಡೆದಿರುವುದರಿಂದ ನಿಶ್ಚಳವಾಗಿ 120ರಿಂದ 125 ಸ್ಥಾನಗಳನ್ನು ಗಳಿಸುತ್ತೇವೆ ಎಂದರು.

ಸಮೀಕ್ಷೆಕ್ಕಿಂತ ಹೆಚ್ಚಾಗಿ ಮತಗಟ್ಟೆಯ ಕಾರ್ಯಕರ್ತರು, ಬೂತ್ ಎಜೆಂಟ್‌ಗಳು ನೀಡಿರುವ ನಿಖರ ಮಾಹಿತಿಯ ಆಧಾರದಲ್ಲಿ ಬಿಜೆಪಿ 125ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಅಧಿಕಾರ ನಡೆಸಲಿದೆ ಎಂದು ಭವಿಷ್ಯ ನುಡಿದರು.

You cannot copy content from Baravanige News

Scroll to Top